ADVERTISEMENT

14 ಸರ್ಕಾರಿ ಪಿಯು ಕಾಲೇಜು ಮುಚ್ಚಲು ಆದೇಶ

​ಪ್ರಜಾವಾಣಿ ವಾರ್ತೆ
Published 24 ಮೇ 2017, 19:30 IST
Last Updated 24 ಮೇ 2017, 19:30 IST
ಬೆಂಗಳೂರು:  ವಿದ್ಯಾರ್ಥಿಗಳ ದಾಖಲಾತಿ ಕಡಿಮೆ ಇರುವ 14 ಕಾಲೇಜುಗಳನ್ನು ಮುಚ್ಚಿ, ಬೇಡಿಕೆ ಇರುವ ಕಡೆಗಳಿಗೆ ಅವುಗಳನ್ನು ಸ್ಥಳಾಂತರಿಸಿ ಪದವಿ ಪೂರ್ವ ಶಿಕ್ಷಣ ಇಲಾಖೆ ಆದೇಶ ಮಾಡಿದೆ.
 
ವಿದ್ಯಾರ್ಥಿಗಳೇ ಇಲ್ಲದ ಮತ್ತು ಹತ್ತು ವಿದ್ಯಾರ್ಥಿಗಳಿಗಿಂತ ಕಡಿಮೆ ದಾಖಲಾತಿ ಹೊಂದಿರುವ ಕಾಲೇಜುಗಳನ್ನು ಮುಚ್ಚಲಾಗಿದೆ. ಈಗ ಪ್ರಥಮ ಪಿಯು ಮುಗಿಸಿದ ವಿದ್ಯಾರ್ಥಿಗಳನ್ನು ಸಮೀಪದ ಕಾಲೇಜಿಗೆ ಸ್ಥಳಾಂತರಿಸಲು ಸೂಚಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
 
ಮುಚ್ಚಿರುವ ಕಾಲೇಜುಗಳಿಗೆ ಪರ್ಯಾಯವಾಗಿ ಸರ್ಕಾರಿ ಪ್ರೌಢ ಶಾಲೆಗಳಲ್ಲಿ ಹೆಚ್ಚಿನ ವಿದ್ಯಾರ್ಥಿಗಳು ಇರುವ ಕಡೆ ಬೇಡಿಕೆಗೆ ಅನುಗುಣವಾಗಿ ಕಾಲೇಜುಗಳನ್ನು ನೀಡಲಾಗಿದೆ.
 
ಮೈಸೂರಿಗೆ ಐದು ಕಾಲೇಜು: 2017–18ನೇ ಸಾಲಿನಿಂದ ಹೊಸದಾಗಿ ಆರಂಭಿಸುತ್ತಿರುವ ಕಾಲೇಜುಗಳ ಪೈಕಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ತನ್ವೀರ್ ಸೇಠ್‌ ಅವರ ತವರು ಜಿಲ್ಲೆ ಮೈಸೂರಿಗೆ ಐದು ಕಾಲೇಜುಗಳನ್ನು ನೀಡಲಾಗಿದೆ. 
 
ಮೈಸೂರು ನಗರದಲ್ಲಿ ಎರಡು ಮಹಿಳಾ ಪಿಯು ಕಾಲೇಜುಗಳು, ಎರಡು ಸಾಮಾನ್ಯ ಕಾಲೇಜುಗಳು ಮತ್ತು ವರುಣಾ ಕ್ಷೇತ್ರಕ್ಕೆ ಒಂದು ಕಾಲೇಜು ಕೊಡಲಾಗಿದೆ.  ಹಾಸನ ಜಿಲ್ಲೆಯಲ್ಲಿ ಐದು, ತುಮಕೂರು ಮತ್ತು ಬಳ್ಳಾರಿ ಜಿಲ್ಲೆಯಲ್ಲಿ ತಲಾ ಮೂರು ಕಾಲೇಜುಗಳನ್ನು ಮುಚ್ಚಲಾಗಿದೆ. 
****
ಮುಚ್ಚಿರುವ ಪಿಯು ಕಾಲೇಜುಗಳು
* ಚಕ್ಕೆನಹಳ್ಳಿ, ಹೊಳೆನರಸೀಪುರ ತಾಲ್ಲೂಕು, ಹಾಸನ ಜಿಲ್ಲೆ
* ಹಿರೇಹಡಗಲಿ, ಹಿರೇಹಡಗಲಿ ತಾಲ್ಲೂಕು, ಬಳ್ಳಾರಿ ಜಿಲ್ಲೆ
* ಸೋಗಿ, ಹಿರೇಡಗಲಿ ತಾಲ್ಲೂಕು, ಬಳ್ಳಾರಿ ಜಿಲ್ಲೆ
* ಉತ್ತಂಗಿ, ಹಿರೇಹಡಗಲಿ ತಾಲ್ಲೂಕು, ಬಳ್ಳಾರಿ ಜಿಲ್ಲೆ
* ದುದ್ದ ಆರ್‌.ಎಸ್, ಹಾಸನ
* ಶ್ರೀನಿವಾಸಪುರ, ಚನ್ನರಾಯಪಟ್ಟಣ ತಾಲ್ಲೂಕು, ಹಾಸನ ಜಿಲ್ಲೆ
* ವನಗೂರು, ಸಕಲೇಶಪುರ ತಾಲ್ಲೂಕು, ಹಾಸನ ಜಿಲ್ಲೆ
* ಕಬ್ಬತ್ತಿ ಕ್ರಾಸ್, ಕಟ್ಟಾಯ ಹೋಬಳಿ, ಹಾಸನ ತಾಲ್ಲೂಕು
* ನ್ಯೂ ಫೋರ್ಟ್‌, ಬೆಂಗಳೂರು
* ಹಾಡ್ಲಿ ವೃತ್ತ, ಮಳವಳ್ಳಿ, ಮಂಡ್ಯ
* ಎಂ.ಶೆಟ್ಟಿಹಳ್ಳಿ, ಶ್ರೀರಂಗಪಟ್ಟಣ ತಾಲ್ಲೂಕು, ಮಂಡ್ಯ ಜಿಲ್ಲೆ
* ಲಕ್ಷ್ಮೀಪುರ, ವಿ.ಜಿ. ದೊಡ್ಡಿ, ರಾಮನಗರ ಜಿಲ್ಲೆ
* ಹರಗುವಳ್ಳಿ, ಶಿಕಾರಿಪುರ ತಾಲ್ಲೂಕು, ಶಿವಮೊಗ್ಗ ಜಿಲ್ಲೆ
* ಆಘಾಲಯ, ಕೆ.ಆರ್. ಪೇಟೆ ತಾಲ್ಲೂಕು, ಮಂಡ್ಯ ಜಿಲ್ಲೆ
****
ಹೊಸ ಕಾಲೇಜು ಮಂಜೂರಾದ ಸ್ಥಳ
*  ಹದಿನಾರು ಗ್ರಾಮ, ಟಿ.ನರಸೀಪುರ ತಾಲ್ಲೂಕು, ಮೈಸೂರು ಜಿಲ್ಲೆ
* ಕಡಗತ್ತೂರು ಗ್ರಾಮ, ಮಧುಗಿರಿ ತಾಲ್ಲೂಕು, ತುಮಕೂರು ಜಿಲ್ಲೆ
* ಶಿಡ್ಲಘಟ್ಟ, ಚಿಕ್ಕಬಳ್ಳಾಪುರ ಜಿಲ್ಲೆ (ಮಹಿಳಾ ಪಿಯು ಕಾಲೇಜು)
* ನಿಜಾಮಿಯಾ ಬಾರಿಗಾರ್ಡ್ ಶಾಲಾ ಆವರಣ, ಮೈಸೂರು (ಮಹಿಳಾ ಪಿಯು ಕಾಲೇಜು)
* ಕಲ್ಯಾಣಗಿರಿ, ವಾರ್ಡ್‌–55, ಮೈಸೂರು
* ರಾಜೀವನಗರ, ವಾರ್ಡ್-53, ಮೈಸೂರು (ಮಹಿಳಾ ಪಿಯು ಕಾಲೇಜು)
* ಹೊನ್ನಾಳಿ, ದಾವಣಗೆರೆ ಜಿಲ್ಲೆ
* ವಿ.ಕೆ. ಒಬೇದುಲ್ಲಾ, ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ, ಶಿವಾಜಿನಗರ, ಬೆಂಗಳೂರು
*  ಹಂದನಕೆರೆ, ಚಿಕ್ಕನಾಯಕನಹಳ್ಳಿ, ತುಮಕೂರು ಜಿಲ್ಲೆ
*  ಮುಳಗುಂದ ಪಟ್ಟಣ, ಗದಗ ತಾಲ್ಲೂಕು
* ಯರಗನಹಳ್ಳಿ, ವಾರ್ಡ್‌–56, ಮೈಸೂರು ನಗರ
* ಕುಂಟನಮಡು ಗ್ರಾಮ, ಅಮೃತಾಪುರ ಹೋಬಳಿ, ತರೀಕೆರೆ ತಾಲ್ಲೂಕು, ಚಿಕ್ಕಮಗಳೂರು ಜಿಲ್ಲೆ
* ತೆಂಡೇಕೆರೆ ಗ್ರಾಮ, ಕೆ.ಆರ್. ಪೇಟೆ ತಾಲ್ಲೂಕು, ಮಂಡ್ಯ ಜಿಲ್ಲೆ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.