ADVERTISEMENT

4.47 ಲಕ್ಷ ರೈತರಿಗೆ ಸಬ್ಸಿಡಿ ಭಾಗ್ಯ: ಸಿದ್ದರಾಮಯ್ಯ

​ಪ್ರಜಾವಾಣಿ ವಾರ್ತೆ
Published 18 ಏಪ್ರಿಲ್ 2017, 7:23 IST
Last Updated 18 ಏಪ್ರಿಲ್ 2017, 7:23 IST
4.47 ಲಕ್ಷ ರೈತರಿಗೆ  ಸಬ್ಸಿಡಿ ಭಾಗ್ಯ: ಸಿದ್ದರಾಮಯ್ಯ
4.47 ಲಕ್ಷ ರೈತರಿಗೆ ಸಬ್ಸಿಡಿ ಭಾಗ್ಯ: ಸಿದ್ದರಾಮಯ್ಯ   

ಬೆಂಗಳೂರು: ಬರ ಪರಿಹಾರ ಕಾಮಗಾರಿ ಕುರಿತು ಜಿಲ್ಲಾಧಿಕಾರಿ, ಜಿಲ್ಲಾ ಪಂಚಾಯಿತಿ ಸಿಇಒ ಜತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಮಂಗಳವಾರ ವಿಡಿಯೊ ಸಂವಾದ ನಡೆಸಿದರು.

ಇದೇ ವೇಳೆ, ಬೆಳೆನಷ್ಟ ಪರಿಹಾರ ವಿತರಣೆಗೆ ಸಂಬಂಧಿಸಿದಂತೆ ಬೆಳೆನಷ್ಟ ಅನುಭವಿಸಿದ ಎಲ್ಲ ರೈತರ ಮಾಹಿತಿಯನ್ನು ತಂತ್ರಾಂಶದಲ್ಲಿ ಅಪ್ ಲೋಡ್ ಮಾಡದೆ ಇರುವ ಅಧಿಕಾರಿಗಳನ್ನು  ಸಿದ್ದರಾಮಯ್ಯ ಅವರು  ತರಾಟೆಗೆ ತೆಗೆದುಕೊಂಡರು.

ಮುಖ್ಯಮಂತ್ರಿ ಗಳು, ಇನ್ ಪುಟ್ ಸಬ್ಸಿಡಿಯಾಗಿ 265 ಕೋಟಿ ರೂ. ಬಿಡುಗಡೆ ಮಾಡಿದರು. ಸಬ್ಸಿಡಿ ಹಣ ರೈತರ ಬ್ಯಾಂಕ್ ಖಾತೆಗೆ ನೇರವಾಗಿ ಜಮೆ ಮಾಡುವ ಆನ್ ಲೈನ್ ಪ್ರಕ್ರಿಯೆಗೆ  ಚಾಲನೆ ನೀಡಿದರು.

ADVERTISEMENT

4.47 ಲಕ್ಷ ರೈತರಿಗೆ ಈ  ಸಬ್ಸಿಡಿ ಸೌಲಭ್ಯ  ಸಿಗಲಿದೆ. ಈ ಹಿಂದೆ 12.03 ಲಕ್ಷ ರೈತರಿಗೆ 671 ಕೋಟಿ ರೂ.ಗಳ ಸಬ್ಸಿಡಿ ವಿತರಣೆಯಾಗಿತ್ತು. ಈ ವರೆಗೆ 936 ಕೋಟಿ ರೂ.ಗಳ ಇನ್ ಪುಟ್ ಸಬ್ಸಿಡಿ ರೈತರ ಬ್ಯಾಂಕ್ ಖಾತೆಗೆ ಜಮೆ ಆಗಿದೆ ಎಂದು ಮಾಹಿತಿ ನೀಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.