ADVERTISEMENT

4,866 ವೈದ್ಯಕೀಯ ಸೀಟು ಲಭ್ಯ

​ಪ್ರಜಾವಾಣಿ ವಾರ್ತೆ
Published 20 ಜುಲೈ 2017, 19:30 IST
Last Updated 20 ಜುಲೈ 2017, 19:30 IST
4,866 ವೈದ್ಯಕೀಯ ಸೀಟು ಲಭ್ಯ
4,866 ವೈದ್ಯಕೀಯ ಸೀಟು ಲಭ್ಯ   

ಬೆಂಗಳೂರು: ರಾಜ್ಯದಲ್ಲಿ 2017–18ನೇ ಸಾಲಿಗೆ ಲಭ್ಯವಿರುವ ವೈದ್ಯಕೀಯ ಮತ್ತು ದಂತ ವೈದ್ಯಕೀಯ ಸೀಟುಗಳ ಪಟ್ಟಿಯನ್ನು ಗುರುವಾರ ಪ್ರಕಟಿಸಲಾಗಿದ್ದು, ಆಯ್ಕೆ ದಾಖಲು (ಆಪ್ಷನ್‌ ಎಂಟ್ರಿ)  ಆರಂಭವಾಗಿದೆ.

ವಿವಿಧ ಕೋಟಾಗಳಡಿ ಸರ್ಕಾರಿ, ಖಾಸಗಿ ಮತ್ತು ಅಲ್ಪಸಂಖ್ಯಾತ ಕಾಲೇಜುಗಳಲ್ಲಿ ಲಭ್ಯ ಇರುವ ಸೀಟುಗಳ ವಿವರ ಪ್ರಕಟಿಸಲಾಗಿದೆ. ಕರ್ನಾಟಕ ಪರೀಕ್ಷಾ ಪ್ರಾಧಿಕಾರದ ವೆಬ್‌ಸೈಟ್‌ನಲ್ಲಿ ಗುರುವಾರ ರಾತ್ರಿವರೆಗೆ 4,866 ವೈದ್ಯಕೀಯ ಸೀಟುಗಳು ಮತ್ತು 1,824  ದಂತ ವೈದ್ಯಕೀಯ ಸೀಟು ವಿವರ ಪ್ರಕಟಿಸಲಾಗಿತ್ತು. ಇದಲ್ಲದೆ, ವಿಶೇಷ ಕೆಟಗೆರಿ ವಿಭಾಗದಡಿ ವೈದ್ಯಕೀಯ, ದಂತ ವೈದ್ಯಕೀಯ ಸೇರಿ 181 ಸೀಟು ಇವೆ.

ಆದರೆ, 2017–18ನೇ ಸಾಲಿಗೆ ಒಟ್ಟು 8,445 ಎಂಬಿಬಿಎಸ್‌ ಸೀಟುಗಳು ಮತ್ತು 3,490 ದಂತ ವೈದ್ಯಕೀಯ ಸೀಟುಗಳು ಲಭ್ಯ ಇವೆ. ಬಾಕಿ ಸೀಟುಗಳ ವಿವರವನ್ನು ಶುಕ್ರವಾರ ಪ್ರಕಟಿಸಲಾಗುವುದು ಎಂದು ವೈದ್ಯಕೀಯ ಶಿಕ್ಷಣ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ.

ADVERTISEMENT

ದಾಖಲಾತಿ ಪರಿಶೀಲನೆ ಪೂರ್ಣಗೊಂಡ ಕರ್ನಾಟಕದವರು ಮತ್ತು ಕರ್ನಾಟಕೇತರ ಅಭ್ಯರ್ಥಿಗಳ ವಿವರ ಮತ್ತು ರ‍್ಯಾಂಕ್ ಪಟ್ಟಿ ಸಹ ಪ್ರಕಟಿಸಲಾಗಿದೆ.

ಶುಲ್ಕ ವಿವರ ಪ್ರಕಟ: ಸರ್ಕಾರಿ ಕಾಲೇಜುಗಳ ಶುಲ್ಕ ₹ 16,700 ನಿಗದಿ ಮಾಡಲಾಗಿದೆ. ಬೆಂಗಳೂರು ಮತ್ತು ಕಲಬುರ್ಗಿಯಲ್ಲಿರುವ ಇಎಸ್‌ಐ ಆಸ್ಪತ್ರೆಗಳಲ್ಲಿನ ವೈದ್ಯಕೀಯ ಸೀಟಿಗೆ ₹ 1 ಲಕ್ಷ ಶುಲ್ಕ ಇದೆ. ಖಾಸಗಿ ಕಾಲೇಜುಗಳಲ್ಲಿನ ಸರ್ಕಾರಿ ಕೋಟಾದ ಸೀಟುಗಳಿಗೆ ₹ 77,000 ಇದೆ. ಖಾಸಗಿ ಕಾಲೇಜುಗಳ ಆಡಳಿತ ಮಂಡಳಿ ಸೀಟುಗಳಿಗೆ ₹ 6,32,500 ನಿಗದಿಯಾಗಿದೆ. ಇದಲ್ಲದೆ, ಎನ್‌ಆರ್‌ಐ ಮತ್ತು ಆಡಳಿತ ಮಂಡಳಿ ಕೋಟಾದಡಿ ಕಾಲೇಜುವಾರು ಶುಲ್ಕಗಳು ಹಾಗೂ ಡೀಮ್ಡ್‌ ವಿವಿ ಶುಲ್ಕಗಳನ್ನು ಪ್ರತ್ಯೇಕವಾಗಿ ಪ್ರಕಟಿಸಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.