ADVERTISEMENT

ಗಣರಾಜ್ಯೋತ್ಸವ : ‘ಕರ್ನಾಟಕ ವನ್ಯಜೀವಿ’ ಸ್ತಬ್ಧಚಿತ್ರ ಆಯ್ಕೆ

​ಪ್ರಜಾವಾಣಿ ವಾರ್ತೆ
Published 23 ಜನವರಿ 2018, 19:30 IST
Last Updated 23 ಜನವರಿ 2018, 19:30 IST
ಗಣರಾಜ್ಯೋತ್ಸವ : ‘ಕರ್ನಾಟಕ ವನ್ಯಜೀವಿ’ ಸ್ತಬ್ಧಚಿತ್ರ ಆಯ್ಕೆ
ಗಣರಾಜ್ಯೋತ್ಸವ : ‘ಕರ್ನಾಟಕ ವನ್ಯಜೀವಿ’ ಸ್ತಬ್ಧಚಿತ್ರ ಆಯ್ಕೆ   

ಬೆಂಗಳೂರು: ದೆಹಲಿಯಲ್ಲಿ ಇದೇ 26ರಂದು ನಡೆಯಲಿರುವ ಗಣರಾಜ್ಯೋತ್ಸವದ ಪಥ ಸಂಚಲನದಲ್ಲಿ ಭಾಗವಹಿಸಲು ವಾರ್ತಾ ಇಲಾಖೆ ಸಿದ್ಧಪಡಿಸಿರುವ ‘ಕರ್ನಾಟಕ ವನ್ಯಜೀವಿ’ ಸ್ತಬ್ಧಚಿತ್ರ ಆಯ್ಕೆಯಾಗಿದೆ.

‘ಬಾಹುಬಲಿ–ವಿಶ್ವ ಶಾಂತಿದೂತ’, ‘ಕರ್ನಾಟಕ ವನ್ಯಜೀವಿ’, ‘ಬೆಂಗಳೂರು–ಡೈನಾಮಿಕ್ ಸಿಟಿ’ ಎಂಬ ಮೂರು ವಿಷಯಗಳನ್ನು ಕಳುಹಿಸಲಾಗಿತ್ತು. ಇದರಲ್ಲಿ ವನ್ಯಜೀವಿ ವಿಷಯ ಆಯ್ಕೆಯಾಗಿದೆ.

ವೈವಿಧ್ಯಮಯವಾದ ಕಾಡು ಪ್ರಾಣಿಗಳಿಂದ ಕೂಡಿದ ಅರಣ್ಯ ಸಂಪತ್ತನ್ನು ಕರ್ನಾಟಕ ಹೊಂದಿದೆ ಎಂಬುದನ್ನು ಸ್ತಬ್ಧಚಿತ್ರದಲ್ಲಿ ಪ್ರತಿಬಿಂಬಿಸಲಾಗಿದೆ. ಗಣರಾಜ್ಯೋತ್ಸವ ಪಥಸಂಚಲನದಲ್ಲಿ 14 ರಾಜ್ಯಗಳ ಸ್ತಬ್ಧಚಿತ್ರಗಳಿಗೆ ಭಾಗವಹಿಸಲು ಅವಕಾಶವಿದ್ದು, ರಾಜ್ಯದ ಸ್ತಬ್ಧಚಿತ್ರ ಸತತ 8ನೇ ಬಾರಿಗೆ ಆಯ್ಕೆಯಾಗಿದೆ ಎಂದು ವಾರ್ತಾ ಇಲಾಖೆಯ ಪ್ರಕಟಣೆ ತಿಳಿಸಿದೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.