ADVERTISEMENT

ಅಂತ್ಯಸಂಸ್ಕಾರದ ವೇಳೆ ಅತ್ತ ‘ಮೃತ’ ಶಿಶು!

ಪಿಟಿಐ
Published 25 ಸೆಪ್ಟೆಂಬರ್ 2016, 19:30 IST
Last Updated 25 ಸೆಪ್ಟೆಂಬರ್ 2016, 19:30 IST

ಢಾಕಾ:  ಮೃತಪಟ್ಟಿದೆ ಎಂದು ಘೋಷಿಸಲಾಗಿದ್ದ ನವಜಾತ ಶಿಶುವೊಂದು ಅಂತ್ಯಸಂಸ್ಕಾರದ ವೇಳೆ ಅತ್ತ ಘಟನೆ ಬಾಂಗ್ಲಾದೇಶದಲ್ಲಿ ಭಾನುವಾರ ವರದಿಯಾಗಿದೆ.

ಫರೀದ್‌ಪುರದ ಜಿಲ್ಲಾ ಕ್ರಿಕೆಟ್‌ ಆಟಗಾರ ನಜ್ಮುಲ್‌ ಹೂಡಾ ಮತ್ತು ಅವರ ಪತ್ನಿ ನಜ್ನಿನ್‌ ಅಖ್ತರ್‌ ಅವರಿಗೆ ಗುರುವಾರ ಹೆಣ್ಣುಮಗು ಜನಿಸಿತ್ತು. ತಮ್ಮ ಮೊದಲ ಮಗುವಿಗೆ ಗಾಲಿಬಾ ಹಯಾತ್‌ ಎಂದು ನಾಮಕರಣ ಮಾಡಿದ್ದರು.

ಮಗು ಜನಿಸಿದ ಎರಡು ಗಂಟೆಯಲ್ಲೇ ಅದು ಮೃತಪಟ್ಟಿರುವುದಾಗಿ ವೈದ್ಯರು ಘೋಷಿಸಿದರು. ಹೀಗಾಗಿ ಮಗುವಿನ ದೇಹವನ್ನು ಹೂಳಲು ಸ್ಮಶಾನಕ್ಕೆ ಕೊಂಡೊಯ್ಯಲಾಯಿತು.

ಮಗುವಿನ ಶವವನ್ನು ಅಲ್ಲಿಯೇ ಇರಿಸಿ ಅಂತ್ಯಸಂಸ್ಕಾರ ನಡೆಸಲು ಶುಕ್ರವಾರ ಬೆಳಿಗ್ಗೆ ಬರುವಂತೆ ಸ್ಮಶಾನವನ್ನು ನೋಡಿಕೊಳ್ಳುವ ವ್ಯಕ್ತಿ ಹೇಳಿದ್ದ. ಆದರೆ, ಅಂತ್ಯಕ್ರಿಯೆ ಮುಂಚಿತವಾದ ವಿಧಿವಿಧಾನಗಳು ಪೂರ್ಣಗೊಳ್ಳುತ್ತಿದ್ದಂತೆಯೇ  ‘ಮೃತ’ ಮಗು ಅಳಲಾರಂಭಿಸಿತು. ಕೂಡಲೇ ಮಗುವನ್ನು ಸಮೀಪದ ಆಸ್ಪತ್ರೆಗೆ ಕೊಂಡೊಯ್ಯಲಾಯಿತು. ಬಳಿಕ ಢಾಕಾದ ಆಸ್ಪತ್ರೆಗೆ ಸೇರಿಸುವಂತೆ ವೈದ್ಯರು ಸಲಹೆ ನೀಡಿದರು. 

ಹೆಲಿಕಾಪ್ಟರ್‌ ಮೂಲಕ ಸ್ಕ್ವೇರ್ ಆಸ್ಪತ್ರೆಗೆ ಮಗುವನ್ನು ಸಾಗಿಸಲಾಯಿತು’ ಎಂದು ಮಗುವಿನ ಅಜ್ಜ ಅಬ್ದುಲ್ ಕಲಾಂ ತಿಳಿಸಿದರು. ‘ಮಗು 24 ವಾರದಲ್ಲಿಯೇ ಜನಿಸಿದ್ದು, 700 ಗ್ರಾಂ ಮಾತ್ರ ತೂಕವಿದೆ. ಅದರ ಸ್ಥಿತಿ ತೀರಾ ಗಂಭೀರವಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.