ADVERTISEMENT

ಅಮೆರಿಕದಲ್ಲಿ ಮತ್ತೊಂದು ಶಾಲಾ ಶೂಟೌಟ್

​ಪ್ರಜಾವಾಣಿ ವಾರ್ತೆ
Published 25 ಅಕ್ಟೋಬರ್ 2014, 9:48 IST
Last Updated 25 ಅಕ್ಟೋಬರ್ 2014, 9:48 IST

‌ವಾಷಿಂಗ್ಟನ್(ಪಿಟಿಐ): ಅಮೆರಿಕದಲ್ಲಿ ಮತ್ತೊಂದು ಶಾಲಾ ಶೂಟೌಟ್ ಘಟನೆ ನಡೆದಿದೆ. ಶಾಲೆಯೊಂದರ ರೆಸ್ಟೊರೆಂಟಿನಲ್ಲಿ ವಿದ್ಯಾರ್ಥಿಯೊಬ್ಬ ಗುಂಡಿನ ದಾಳಿ ನಡೆಸಿದ್ದು, ಘಟನೆಯಲ್ಲಿ ಒಬ್ಬ ವಿದ್ಯಾರ್ಥಿ ಸಾವನ್ನಪ್ಪಿದ್ದು, ನಾಲ್ವರು ಗಂಭೀರವಾಗಿ ಗಾಯಗೊಂಡಿದ್ದಾರೆ. ಬಳಿಕ ದಾಳಿ ನಡೆಸಿದ ವಿದ್ಯಾರ್ಥಿಯೂ ಸಾವನ್ನಪ್ಪಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.

ವಾಷಿಂಗ್ಟನ್ ರಾಜ್ಯದ ಸೀಟ್ಟಲ್ ನಗರದಿಂದ 55 ಕಿ.ಮೀ ದೂರದಲ್ಲಿರುವ ಮೆರಿಸ್ವಿಲ್ಲೆ–ಪಿಲ್ಚುಕ್ ಹೈಸ್ಕೂಲಿನಲ್ಲಿ ಶುಕ್ರವಾರ ಈ ದುರ್ಘಟನೆ ನಡೆದಿದೆ.

ದಾಳಿ ನಡೆಸಿದ ವಿದ್ಯಾರ್ಥಿಯನ್ನು ಜೆಲೆನ್ ಫ್ರೈಬರ್ಗ್ ಎಂದು ಗುರುತಿಸಲಾಗಿದೆ. ತನ್ನ ಜೀವನವನ್ನು ಕೊನೆಗೊಳಿಸುವ ಮುನ್ನ ಫ್ರೈಬರ್ಗ್, ಒಬ್ಬ ವಿದ್ಯಾರ್ಥಿನಿಯನ್ನು ಕೊಂದಿದ್ದಾನೆ. ಗಾಯಾಳುಗಳಲ್ಲಿ ಇಬ್ಬರು ವಿದ್ಯಾರ್ಥಿನಿಯರು ಹಾಗೂ ಇಬ್ಬರು ವಿದ್ಯಾರ್ಥಿಗಳಾಗಿದ್ದು, ಅವರನ್ನು ಹತ್ತಿರದ ಆಸ್ಪತ್ರೆಗೆ ದಾಖಲಿಸಲಾಗಿದೆ.

ADVERTISEMENT

ಗಾಯಾಳುಗಳಲ್ಲಿ ಇಬ್ಬರು ದಾಳಿ ನಡೆಸಿದ ವಿದ್ಯಾರ್ಥಿಯ ಸಂಬಂಧಿಗಳಾಗಿದ್ದು, ತಲೆಯ ಭಾಗದಲ್ಲಿ ಶೂಟ್ ಮಾಡಲಾಗಿದೆ ಎಂದು ಬಿಬಿಸಿ ವರದಿ ಮಾಡಿದೆ. 

ದಾಳಿ ನಡೆಸಿದ ವಿದ್ಯಾರ್ಥಿ ಬಳಸಿದ ಬಂದೂಕು ಅವರ ತಂದೆಯದ್ದು ಎಂದು ಸಿಎನ್ಎನ್ ವರದಿ ಮಾಡಿದೆ. ಅಲ್ಲದೇ ಅದೊಂದು 'ಉನ್ನತ ಸಾಮರ್ಥ್ಯ'ದ ಬಂದೂಕು ಎಂದೂ ಅದು ವರದಿ ಮಾಡಿದೆ.

ದಾಳಿಯ ಬಳಿಕ ಶಾಲೆಯನ್ನು ಮುಚ್ಚಲಾಗಿದೆ. ಘಟನೆಯ ಬಗ್ಗೆ ಹೆಚ್ಚಿನ ತನಿಖೆಗಾಗಿ ಸ್ಥಳೀಯ ಅಧಿಕಾರಿಗಳಿಗೆ ನೆರವು ನೀಡಲು ಫೆಡರಲ್ ಬ್ಯೂರೊ ಆಫ್ ಇನ್ವೆಸ್ಟಿಗೇಷನ್ ತನ್ನ ಸಿಬ್ಬಂದಿಯನ್ನು ಕಳುಹಿಸುತ್ತಿದೆ.

ಅಮೆರಿಕದಲ್ಲಿ ಈ ವರ್ಷದಲ್ಲಿ ಶಾಲೆಯಲ್ಲಿ ನಡೆದ ಎರಡನೇ ಶೂಟೌಟ್ ಪ್ರಕರಣ ಇದಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.