ADVERTISEMENT

ಇಟಲಿಯಲ್ಲೂ ಪ್ರತ್ಯೇಕತೆ ಕೂಗು

ಲೊಂಬಾರ್ಡಿ, ವೆನಿಟೊ ಸ್ವಾಯತ್ತತೆಗೆ ಜನಮತಗಣನೆ

ಪಿಟಿಐ
Published 22 ಅಕ್ಟೋಬರ್ 2017, 19:30 IST
Last Updated 22 ಅಕ್ಟೋಬರ್ 2017, 19:30 IST
ಇಟಲಿಯಲ್ಲೂ ಪ್ರತ್ಯೇಕತೆ  ಕೂಗು
ಇಟಲಿಯಲ್ಲೂ ಪ್ರತ್ಯೇಕತೆ ಕೂಗು   

ಮಿಲಾನ್: ಸ್ವತಂತ್ರ ದೇಶಕ್ಕೆ ಆಗ್ರಹಿಸಿ ಉತ್ತರ ಇಟಲಿಯ ಲೊಂಬಾರ್ಡಿ ಹಾಗೂ ವೆನಿಟೊ ಪ್ರಾಂತ್ಯಗಳಲ್ಲಿ ಭಾನುವಾರ ಜನಮತಗಣನೆ ನಡೆಯಿತು.

ಸ್ಥಳೀಯ ಆಡಳಿತಕ್ಕೆ ಕೇಂದ್ರ ಸರ್ಕಾರದಿಂದ ಅಧಿಕಾರ ಹಸ್ತಾಂತರವಾಗುವ ಪ್ರಕ್ರಿಯೆಯ ಮೊದಲ ಹಂತ ಆರಂಭವಾಗಿದೆ. ಎರಡು ಸಂಪದ್ಭರಿತ ಪ್ರದೇಶಗಳು ಪ್ರತ್ಯೇಕಗೊಳ್ಳಬೇಕು ಎಂಬ ಭಾವನಾತ್ಮಕ ವಿಚಾರ ಕೆಲವು ತೀವ್ರವಾದಿ ಗುಂಪುಗಳಿಗೆ ಮಾತ್ರ ಸೀಮಿತವಾಗಿದೆ.

ಸ್ಕಾಟ್ಲೆಂಡ್, ಬ್ರಿಟನ್ ಹಾಗೂ ಸ್ಪೇನ್‌ನಲ್ಲಿ ಪ್ರತ್ಯೇಕತೆಗಾಗಿ ನಡೆದ ಜನಮತಗಣನೆಯ ಪ್ರಭಾವ ಇಲ್ಲಿ ಹೆಚ್ಚು ಪ್ರಭಾವ ಬೀರಿದೆ. ಹೀಗಾಗಿ ಇಲ್ಲಿಯೂ ಸ್ವಾಯತ್ತತೆ ಪರವಾಗಿ ಮತ ಚಲಾವಣೆಯಾಗಿರುವ ಸಾಧ್ಯತೆಯಿದೆ ಎನ್ನಲಾಗಿದೆ.

ADVERTISEMENT

ಲೊಂಬಾರ್ಡಿಯಲ್ಲಿ ಮಿಲಾನ್ ಹಾಗೂ ವೆನಿಟೊದಲ್ಲಿ ವೆನಿಸ್ ನಗರಗಳು ಸೇರಿವೆ. ಇವೆರಡರಲ್ಲಿ ಇಟಲಿಯ ಕಾಲುಭಾಗದಷ್ಟು ಜನಸಂಖ್ಯೆ ಇದೆ. ಶೇ 30ರಷ್ಟು ಆದಾಯವೂ ಇಲ್ಲಿಂದಲೇ ಬರುತ್ತಿದೆ.

ವೆನಿಟೊ ಅಧ್ಯಕ್ಷ ಲುಕಾ ಜೈಯಾ ಹಾಗೂ ಲೊಂಬಾರ್ಡಿ ಅಧ್ಯಕ್ಷ ರೊಬರ್ಟೊ ಮರಿನೊ ಅವರಿಗೆ ಆರ್ಥಿಕ ಮರುಸಮತೋಲನವನ್ನು ಮುಖ್ಯ ಆದ್ಯತೆಯಾಗಿ ಪರಿಗಣಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.