ADVERTISEMENT

ಉಗ್ರರೊಂದಿಗೆ ಘರ್ಷಣೆ: ಸೈನಿಕರು ಸೇರಿ 50 ಪೊಲೀಸರ ಸಾವು

ಏಜೆನ್ಸೀಸ್
Published 21 ಅಕ್ಟೋಬರ್ 2017, 19:30 IST
Last Updated 21 ಅಕ್ಟೋಬರ್ 2017, 19:30 IST

ಕೈರೋ: ಈಜಿಪ್ಟ್‌ನ ಬಹರಿಯಾ ಪ್ರದೇಶದಲ್ಲಿ  ಉಗ್ರರೊಂದಿಗೆ ನಡೆದ ಘರ್ಷಣೆಯಲ್ಲಿ ಅಧಿಕಾರಿಗಳು ಸೇರಿದಂತೆ 55 ಪೊಲೀಸರು ಸಾವನ್ನಪ್ಪಿದ್ದು, 32 ಮಂದಿ ಗಾಯಗೊಂಡಿದ್ದಾರೆ.

ಉಗ್ರರು ಅಡಗಿದ್ದ ನೆಲೆಗಳ ಮೇಲೆ ಪೊಲೀಸರು ದಾಳಿ ನಡೆಸಿದಾಗ ಪ್ರತಿಯಾಗಿ ಉಗ್ರರು ಗುಂಡಿನ ದಾಳಿ ನಡೆಸಿದರು ಎಂದು ಅಧಿಕಾರಿಗಳು ಹೇಳಿದ್ದಾರೆ. ದಾಳಿಯ ಹೊಣೆಯನ್ನು ಈವರೆಗೆ ಯಾವುದೇ ಉಗ್ರ ಸಂಘಟನೆ ಹೊತ್ತುಕೊಂಡಿಲ್ಲ.

ರಕ್ಷಣಾ ಪಡೆ ಹಾಗೂ ಹಾಸ್ಮ್‌ ಎಂಬ  ಉಗ್ರಗಾಮಿ ಸಂಘಟನೆ  ನಡುವೆ ಶುಕ್ರವಾರ ನಡೆದ ಘರ್ಷಣೆಯಲ್ಲಿ ಕೆಲ ಉಗ್ರರೂ ಸಾವನ್ನಪ್ಪಿರುವುದಾಗಿ ಈಜಿಪ್ಟ್‌ನ ಆಂತರಿಕ ಸಚಿವಾಲಯ ತಿಳಿಸಿತ್ತು.

ADVERTISEMENT

ಈಜಿಪ್ಟ್‌ನ ಪ್ರಕ್ಷುಬ್ಧಪೀಡಿತ ಉತ್ತರದ ಸಿನೈ ಪ್ರಾಂತ್ಯದ ಮೇಲೆ ಭದ್ರತಾ ಪಡೆಗಳು ದಾಳಿ ನಡೆಸುತ್ತಲೇ ಬಂದಿವೆ. ಉಗ್ರರಿಗೆ ಸೇರಿದ್ದ ಹಲವು ಮನೆಗಳನ್ನು ನಾಶಮಾಡಲಾಗಿದೆ. ಗಾಜಾಪಟ್ಟಿಯ ಕಡೆಗೆ ಸಾಗುವ ಸುರಂಗ ಮಾರ್ಗದ ಮೇಲೂ ದಾಳಿ ನಡೆದಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.