ADVERTISEMENT

ಉಗ್ರವಾದದ ವಿರುದ್ಧ ಹೋರಾಟಕ್ಕೆ ಪಣ

ಜಿ–7 ಶೃಂಗಸಭೆಯಲ್ಲಿ ನಾಯಕರ ಪ್ರತಿಜ್ಞೆ

ಏಜೆನ್ಸೀಸ್
Published 27 ಮೇ 2017, 19:30 IST
Last Updated 27 ಮೇ 2017, 19:30 IST

ಟಾರ್ಮಿನಾ, (ಇಟಲಿ):  ಉಗ್ರವಾದದ ವಿರುದ್ಧ ಕಠಿಣ ಹೋರಾಟಕ್ಕೆ ಪಣತೊಟ್ಟಿರುವ ಜಿ-7 ರಾಷ್ಟ್ರಗಳು, ಆನ್‌ಲೈನ್‌ನಲ್ಲಿ ಉಗ್ರರು ಮಾಹಿತಿ ಹಂಚಿಕೊಳ್ಳಲು ಅವಕಾಶ ನೀಡದಂತೆ ನೋಡಿಕೊಳ್ಳಲು ಅಂತರ್ಜಾಲ ಪೂರೈಕೆದಾರರು ಮತ್ತು ಸಾಮಾಜಿಕ ಜಾಲತಾಣ ಸಂಸ್ಥೆಗಳಲ್ಲಿ ಮನವಿ ಮಾಡಿಕೊಂಡಿವೆ.

ಮ್ಯಾಂಚೆಸ್ಟರ್‌ನಲ್ಲಿ ನಡೆದ ಆತ್ಮಾಹುತಿ ದಾಳಿಯನ್ನು ಖಂಡಿಸಿದ ಜಿ–7 ರಾಷ್ಟ್ರಗಳ  ನಾಯಕರು ಬ್ರಿಟನ್‌ನ ಬೆಂಬಲಕ್ಕೆ ನಿಂತಿದ್ದಾರೆ.

ಸಿರಿಯಾದಂತಹ ಬಿಕ್ಕಟ್ಟು ಹೊಂದಿರುವ ರಾಷ್ಟ್ರಗಳಿಂದ ಚದುರಿರುವ ವಿದೇಶಿ ಉಗ್ರರನ್ನು ಪತ್ತೆಮಾಡಿ ಅವರ ವಿರುದ್ಧ ಕ್ರಮಕೈಗೊಳ್ಳಲು ಒಗ್ಗಟ್ಟಿನ ಪ್ರಯತ್ನ ನಡೆಸುವ ಪ್ರತಿಜ್ಞೆಯನ್ನು  ಜಿ–7 ರಾಷ್ಟಗಳು ಮಾಡಿವೆ.

ಐಎಸ್‌ ಉಗ್ರರ ಅಸ್ತಿತ್ವ ನಾಶವಾಗುವ ಬದಲು ಅವರ ಶಕ್ತಿ ಬಲಗೊಳ್ಳುತ್ತಿದೆ ಎಂದು ಬ್ರಿಟನ್ ಪ್ರಧಾನಿ ತೆರೆಸಾ ಮೇ  ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದ್ದಾರೆ.
ಮುಂದಿನ ವಾರ ತೀರ್ಮಾನ:  ಪ್ಯಾರಿಸ್‌ ಹವಾಮಾನ ಒಪ್ಪಂದಕ್ಕೆ ಸಹಿ ಹಾಕುವುದಕ್ಕೆ ಸಂಬಂಧಿಸಿದಂತೆ ಮುಂದಿನವಾರ ಅಂತಿಮ ನಿರ್ಧಾರ ಕೈಗೊಳ್ಳುವುದಾಗಿ ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಹೇಳಿದ್ದಾರೆ.

ಶೃಂಗಸಭೆಯ ಅಂತಿಮ ದಿನವಾದ ಶನಿವಾರ ಟ್ವೀಟ್‌ನಲ್ಲಿ ಈ ಆಶ್ಚರ್ಯಕರ ಘೋಷಣೆ ಹೊರಬಿದ್ದಿದೆ.

ಅಮೆರಿಕ ಸಹಿಹಾಕದಿದ್ದರೂ ಪ್ಯಾರಿಸ್‌ ಒಪ್ಪಂದಕ್ಕೆ ತಾವು ಬದ್ಧವಾಗಿರುವುದಾಗಿ ಜಿ–7 ರಾಷ್ಟಗಳ ಪೈಕಿ ಆರು ರಾಷ್ಟ್ರಗಳು ಎರಡನೇ ದಿನದ ಆರಂಭದಲ್ಲಿ ಹೇಳಿಕೆ ನೀಡಿದ್ದವು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.