ADVERTISEMENT

ಉ. ಕೊರಿಯಾ: ‘ಬಿಯರ್‌ ಉತ್ಸವ’ ರದ್ದು

ಏಜೆನ್ಸೀಸ್
Published 27 ಜುಲೈ 2017, 19:30 IST
Last Updated 27 ಜುಲೈ 2017, 19:30 IST
ಉ. ಕೊರಿಯಾ: ‘ಬಿಯರ್‌ ಉತ್ಸವ’ ರದ್ದು
ಉ. ಕೊರಿಯಾ: ‘ಬಿಯರ್‌ ಉತ್ಸವ’ ರದ್ದು   

ಪ್ಯೋಂಗ್ಯಾಂಗ್: ವರ್ಷಕ್ಕೊಮ್ಮೆ ಒಂದು ತಿಂಗಳ ಕಾಲ ನಡೆಯುವ ಇಲ್ಲಿನ ಜನಪ್ರಿಯ ‘ಬಿಯರ್‌ ಉತ್ಸವ’ವನ್ನು ಉತ್ತರ ಕೊರಿಯಾ ದಿಢೀರನೆ ರದ್ದುಪಡಿಸಿದೆ. ಆದರೆ ಮದ್ಯದ ಉತ್ಪನ್ನಗಳು ಅಗ್ಗವಾಗಿರುವ ದೇಶದಲ್ಲಿ, ಸ್ಥಳೀಯರಿಗೆ ಅದರಿಂದ  ನಿರಾಸೆಯೇನೂ  ಆಗಿಲ್ಲ.

ಕಳೆದ ವರ್ಷ ಟೇಡಾಂಗ್‌ ನದಿಯ ಪಕ್ಕದಲ್ಲಿ ನಡೆದಿದ್ದ ‘ಬಿಯರ್ ಉತ್ಸವ’  ಪ್ರವಾಸಿಗರು ಮತ್ತು ಸ್ಥಳೀಯರಿಂದಾಗಿ ಭಾರಿ ಯಶಸ್ಸು ಕಂಡಿತ್ತು.

ಅಮೆರಿಕದ ಪ್ರವಾಸಿಯೊಬ್ಬರ ಸಾವು ಮತ್ತು ಜುಲೈ 4ರಂದು ನಡೆದ ದೇಶದ ಮೊದಲ ಖಂಡಾಂತರ ಕ್ಷಿಪಣಿ ಪರೀಕ್ಷೆಗೆ ಅಂತರರಾಷ್ಟ್ರೀಯ ಮಟ್ಟದಲ್ಲಿ ಟೀಕೆಗಳು ವ್ಯಕ್ತವಾಗಿದ್ದು, ಇದು  ದೇಶದ ಪ್ರವಾಸೋದ್ಯಮದ ಮೇಲೂ ಪರಿಣಾಮ ಬೀರಿದೆ.

ADVERTISEMENT

ಈ ಸಂದರ್ಭದಲ್ಲೇ, ಕಾರಣ ನೀಡದೆ ಸರ್ಕಾರ ಉತ್ಸವ ರದ್ದುಪಡಿಸಿದೆ. ಆದರೆ ದೇಶದ ಪ್ರಮುಖ ಮದ್ಯ ತಯಾರಿಕಾ ಸಂಸ್ಥೆಯು ಉತ್ಸವಕ್ಕಾಗಿ ಸಿದ್ಧಪಡಿಸಿದ್ದ, ಇನ್ನೂ ಹೆಸರಿಡದ ಹೊಸ ಬಿಯರ್‌ ಅನ್ನು ಬಿಡುಗಡೆಗೊಳಿಸಿದೆ.

‘ಟೇಡಾಂಗ್‌ಗ್ಯಾಂಗ್‌ ಬಿಯರ್‌’ ವಿಶ್ವ ದರ್ಜೆಯ ಗುಣಮಟ್ಟ ಹೊಂದಿದ್ದು, ಇದನ್ನು ಬಹುತೇಕ ಉತ್ತರ ಕೊರಿಯನ್ನರು ರಾಷ್ಟ್ರೀಯ ಹೆಮ್ಮೆ ಎಂದು ಭಾವಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.