ADVERTISEMENT

ಐಎಸ್‌ ಪ್ರತೀಕಾರ: 30 ನಾಗರಿಕರನ್ನು ಅಪಹರಿಸಿ ಹತ್ಯೆ

ಏಜೆನ್ಸೀಸ್
Published 27 ಅಕ್ಟೋಬರ್ 2016, 12:55 IST
Last Updated 27 ಅಕ್ಟೋಬರ್ 2016, 12:55 IST

ಕಾಬುಲ್‌ : ಇಸ್ಲಾಮಿಕ್‌ ಸ್ಟೇಟ್‌ ಉಗ್ರರೊಂದಿಗೆ ಸಂಪರ್ಕ ಹೊಂದಿರುವ ಉಗ್ರರ ಗುಂಪೊಂದು   ಆಪ್ಘಾನಿಸ್ತಾನದ ಪ್ರಾಂತೀಯ ರಾಜಧಾನಿ ಫೈರೋಜ್‌ ಕೋಹದ 30 ಕುರಿಗಾಹಿಗಳ ಹತ್ಯೆ ನಡೆಸಿದೆ ಎಂದು ಸ್ಥಳೀಯ ಸರ್ಕಾರ ತಿಳಿಸಿದೆ.

ಸರ್ಕಾರಿ ಪಡೆಗಳು ಸ್ಥಳೀಯರ ಸಹಕಾರದೊಂದಿಗೆ ಮಂಗಳವಾರ ಕಾರ್ಯಾಚರಣೆ ನಡೆಸಿ ದಯಿಷ್‌ ಉಗ್ರ ಸಂಘಟನೆಯ ಕಮಾಂಡರ್‌ನನ್ನು ಕೊಂದಿದ್ದರು.  ಇದಕ್ಕೆ ಪ್ರತಿಕಾರ ತೀರಿಸಿಕೊಳ್ಳಲು ದಯೀಷ್‌ ಉಗ್ರರು ಮಕ್ಕಳು ಸೇರಿದಂತೆ 30 ಕುರಿಗಾಹಿಗಳನ್ನು ಮಂಗಳವಾರ ಸಂಜೆಯ ಹೊತ್ತಿಗೆ ಅಪಹರಿಸಿ ಕೊಂದು ಹಾಕಿದ್ದಾರೆ ಎಂದು ಅವರು ತಿಳಿಸಿದ್ದಾರೆ. ಮೃತದೇಹಗಳನ್ನು ಸ್ಥಳೀಯರು ಬುಧವಾರ ಗುರುತಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.