ADVERTISEMENT

ಒಬ್ಬಂಟಿಯಾಗಿ ವಿದೇಶ ಪ್ರವಾಸ ಮಾಡಿದ ಮೆಲಾನಿಯಾ ಟ್ರಂಪ್‌

ಏಜೆನ್ಸೀಸ್
Published 23 ಸೆಪ್ಟೆಂಬರ್ 2017, 19:30 IST
Last Updated 23 ಸೆಪ್ಟೆಂಬರ್ 2017, 19:30 IST
ಮೆಲಾನಿಯಾ ಟ್ರಂಪ್‌
ಮೆಲಾನಿಯಾ ಟ್ರಂಪ್‌   

ವಾಷಿಂಗ್ಟನ್‌: ಅಮೆರಿಕದ ಮೊದಲ ಮಹಿಳಾ ಪ್ರಜೆಯಾಗಿರುವ ಮೆಲಾನಿಯಾ ಟ್ರಂಪ್ ಇದೀಗ ಮಹತ್ವದ ನಿರ್ಧಾರ ತೆಗೆದುಕೊಳ್ಳುವ ಮೂಲಕ ಗಮನಸೆಳೆದಿದ್ದಾರೆ.

ಗಾಯಾಳು ಸೈನಿಕರ ಅಂತರರಾಷ್ಟ್ರೀಯ ಕ್ರೀಡಾಕೂಟ ತಂಡದ ಅಮೆರಿಕ ನೇತೃತ್ವವನ್ನು ಅವರು ವಹಿಸಿದ್ದಾರೆ. ಈ ಮೂಲಕ ಡೊನಾಲ್ಡ್ ಟ್ರಂಪ್‌ ಅವರು ಅಮೆರಿಕ ಅಧ್ಯಕ್ಷರಾದ ಬಳಿಕ ಇದೇ ಮೊದಲ ಬಾರಿಗೆ ಪತಿಯನ್ನು ಬಿಟ್ಟು ವಿದೇಶ ಪ್ರವಾಸಕ್ಕೆ ತೆರಳಿದ್ದಾರೆ.

ಟೊರಂಟೊದಲ್ಲಿ ಶನಿವಾರ ತಂಗಲಿರುವ ಮೆಲಾನಿಯಾ ರಾಜಾತಿಥ್ಯವನ್ನು ಪಡೆಯಲಿದ್ದಾರೆ. 2014ರಲ್ಲಿ ‘ಇನ್‌ವಿಕ್ಟಸ್‌ ಕ್ರೀಡಾಕೂಟ’ ಆರಂಭಿಸಿದ ಬ್ರಿಟನ್‌ನ ರಾಜಕುಮಾರ ಹ್ಯಾರಿಯನ್ನು ಮೊತ್ತಮೊದಲ ಬಾರಿ ಭೇಟಿಯಾಗಲಿದ್ದಾರೆ.

ADVERTISEMENT

ಪ್ರವಾಸದಲ್ಲಿ ಕೆನಡಾದ ಪ್ರಧಾನಿ ಜಸ್ಟಿನ್‌ ಟ್ರುಡಿಯು ಅವರನ್ನು ಭೇಟಿಯಾಗಲಿದ್ದು, ಉದ್ಘಾಟನಾ ಸಮಾರಂಭದಲ್ಲೂ ಭಾಗವಹಿಸಲಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.