ADVERTISEMENT

ಕಾಬೂಲ್‌ನಲ್ಲಿ ಸರಣಿ ಸ್ಫೋಟ: 40ಕ್ಕೂ ಹೆಚ್ಚು ಜನ ಸಾವು

ಏಜೆನ್ಸೀಸ್
Published 28 ಡಿಸೆಂಬರ್ 2017, 11:55 IST
Last Updated 28 ಡಿಸೆಂಬರ್ 2017, 11:55 IST
ಕಾಬೂಲ್‌ನಲ್ಲಿ ಸರಣಿ ಸ್ಫೋಟ: 40ಕ್ಕೂ ಹೆಚ್ಚು ಜನ ಸಾವು
ಕಾಬೂಲ್‌ನಲ್ಲಿ ಸರಣಿ ಸ್ಫೋಟ: 40ಕ್ಕೂ ಹೆಚ್ಚು ಜನ ಸಾವು   

ಕಾಬೂಲ್‌: ಅಫ್ಗಾನಿಸ್ತಾನದ ರಾಜಧಾನಿ ಕಾಬೂಲ್‌ನ ಕೇಂದ್ರ ಭಾಗದಲ್ಲಿರುವ ಶಿಯಾ ಸಮುದಾಯದ ಸಾಂಸ್ಕೃತಿಕ ಕೇಂದ್ರದಲ್ಲಿ ಗುರುವಾರ ಸಂಭವಿಸಿದ ಸರಣಿ ಸ್ಫೋಟದಲ್ಲಿ 40 ಮಂದಿ ಮೃತಪಟ್ಟು, 30ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದಾರೆ.

ಸಾವು, ನೋವಿನ ಸಂಖ್ಯೆ ಇನ್ನೂ ಹೆಚ್ಚಾಗುವ ಸಾಧ್ಯತೆ ಇದೆ ಎಂದು ಆಂತರಿಕ ಭದ್ರತಾ ಸಚಿವಾಲಯ ತಿಳಿಸಿದೆ. ತಕ್ಷಣಕ್ಕೆ ಯಾವುದೇ ಉಗ್ರ ಸಂಘಟನೆಗಳು ಕೃತ್ಯದ ಹೊಣೆ ಹೊತ್ತಿಲ್ಲ. ಈ ಕೃತ್ಯದಲ್ಲಿ ತನ್ನ ಪಾತ್ರವಿಲ್ಲ ಎಂದು ತಾಲಿಬಾನ್‌ ಸ್ಪಷ್ಟಪಡಿಸಿದೆ.

ಕಾಬೂಲ್‌ನ ಗುಪ್ತಚರ ಇಲಾಖೆ ಕಚೇರಿ ಆವರಣದಲ್ಲಿ ಬುಧವಾರ ಐಎಸ್‌ ಉಗ್ರ ಸಂಘಟನೆ ಆತ್ಮಾಹುತಿ ದಾಳಿ ನಡೆಸಿತ್ತು. ದಾಳಿಯಲ್ಲಿ ಆರು ನಾಗರಿಕರು ಮೃತಪಟ್ಟಿದ್ದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.