ADVERTISEMENT

ಕೆಲಸ ನೀಡಿ: ಪಿಚೈಗೆ ಬಾಲಕಿ ಪತ್ರ

ಪಿಟಿಐ
Published 16 ಫೆಬ್ರುವರಿ 2017, 19:30 IST
Last Updated 16 ಫೆಬ್ರುವರಿ 2017, 19:30 IST
ಕೆಲಸ ನೀಡಿ: ಪಿಚೈಗೆ ಬಾಲಕಿ ಪತ್ರ
ಕೆಲಸ ನೀಡಿ: ಪಿಚೈಗೆ ಬಾಲಕಿ ಪತ್ರ   
ಲಂಡನ್: ಕೈಬರಹದಲ್ಲಿ ಉದ್ಯೋಗದ ಅರ್ಜಿ ಕಳುಹಿಸಿದ್ದ ಬ್ರಿಟನ್‌ನ ಏಳು ವರ್ಷದ ಬಾಲಕಿಗೆ ಗೂಗಲ್‌ನ ಸಿಇಒ ಭಾರತ ಮೂಲದ ಸುಂದರ್‌ ಪಿಚೈ ಪ್ರತಿಕ್ರಿಯೆ ನೀಡುವ ಮೂಲಕ ಅಚ್ಚರಿ ನೀಡಿದ್ದಾರೆ.
 
ಟ್ಯಾಬ್ಲೆಟ್‌ ಮತ್ತು ರೋಬೊಟ್‌ಗಳ ಬಗ್ಗೆ ಅತೀವ ಆಸಕ್ತಿ ಹೊಂದಿರುವ ಇಂಗ್ಲೆಂಡ್‌ನ ಹಿಯರ್‌ಫೋರ್ಡ್‌ ಪಟ್ಟಣದ ಕ್ಲೋವ್‌ ಬ್ರಿಡ್ಜ್‌ವಾಟರ್‌ ಎಂಬ ಬಾಲಕಿ, ತನ್ನ ಕಂಪ್ಯೂಟರ್‌ ಕೌಶಲಗಳ ಪಟ್ಟಿ ಮಾಡಿ ಪಿಚೈ ಅವರಿಗೆ ಕಳುಹಿಸಿದ್ದಳು.
 
ಇದಕ್ಕೆ ಪ್ರತಿಕ್ರಿಯೆ ನೀಡಿರುವ ಪಿಚೈ, ‘ನಿನಗೆ ಕಂಪ್ಯೂಟರ್ ಮತ್ತು ರೋಬೊಟ್‌ಗಳ ಕುರಿತು ಆಸಕ್ತಿ ಇರುವುದು ತಿಳಿದು ಸಂತೋಷವಾಯಿತು. ತಂತ್ರಜ್ಞಾನದ ಕುರಿತು ಕಲಿತುಕೊಳ್ಳುವುದನ್ನು ಮುಂದುವರಿಸುತ್ತೀಯಾ ಎಂಬ ಭರವಸೆ ಇದೆ. ಸತತ ಕಠಿಣ ಶ್ರಮದ ಮೂಲಕ ನಿನ್ನ ಕನಸು ಸಾಕಾರಗೊಳಿಸಲು ಪ್ರಯತ್ನಿಸು. ಕಠಿಣ ಶ್ರಮ ವಹಿಸಿದರೆ ಎಲ್ಲವೂ ಸಾಧ್ಯ. ಶಿಕ್ಷಣ ಮುಗಿದ ಬಳಿಕ ನಿನ್ನ ಉದ್ಯೋಗ ಅರ್ಜಿಯನ್ನು ಸ್ವೀಕರಿಸಲು ನಾನು ಕಾಯುತ್ತಿರುತ್ತೇನೆ’ ಎಂದು ಪತ್ರದಲ್ಲಿ ಹೇಳಿದ್ದಾರೆ. 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.