ADVERTISEMENT

ಕೇರಳದ ಇಬ್ಬರಿಗೆ ಸಂತ ಪದವಿ

​ಪ್ರಜಾವಾಣಿ ವಾರ್ತೆ
Published 23 ನವೆಂಬರ್ 2014, 11:30 IST
Last Updated 23 ನವೆಂಬರ್ 2014, 11:30 IST
ಕೇರಳದಿಂದ ಆಗಮಿಸಿದ್ದ ಕ್ಯಾಥೋಲಿಕ್‌ ಕ್ರಿಶ್ಚಿಯನ್ನರು  ಭಾನುವಾರ ವ್ಯಾಟಿಕನ್‌ನ ಸೇಂಟ್‌ ಪೀಟರ್ಸ್‌ ಸ್ಕ್ವೇರ್‌ನಲ್ಲಿ ನಡೆದ ವಿಶೇಷ ಪ್ರಾರ್ಥನೆಯಲ್ಲಿ ಭಾಗವಹಿಸಲು ಫಾದರ್‌ ಕುರಿಯಾಕೋಸ್‌ ಇಲಿಯಾಸ್‌ ಚಾವರ ಮತ್ತು ದಿವಂಗತ ಸಿಸ್ಟರ್‌ ಯುಫ್ರೇಸಿಯಾ ಅವರ ಕಟೌಟ್‌ಗಳನ್ನು ಹಿಡಿದು ಮೆರವಣಿಗೆಯಲ್ಲಿ ಸಾಗಿದ ದೃಶ್ಯ – ಎಎಫ್‌ಪಿ ಚಿತ್ರ

ವ್ಯಾಟಿಕನ್‌ (ಪಿಟಿಐ):  ಕೇರಳದ ದಿವಂಗತ ಫಾದರ್‌ ಕುರಿಯಾಕೋಸ್‌ ಇಲಿಯಾಸ್‌ ಚಾವರ ಮತ್ತು ದಿವಂಗತ ಸಿಸ್ಟರ್‌ ಯುಫ್ರೇಸಿಯಾ ಅವರಿಗೆ ಮರಣೋತ್ತರವಾಗಿ ಭಾನು­ವಾರ ಪೋಪ್‌ ಫ್ರಾನ್ಸಿಸ್‌ ಅವರು ವ್ಯಾಟಿಕನ್‌ನಲ್ಲಿ ಸಂತ ಪದವಿ ಪ್ರದಾನ ಮಾಡಿದರು.

ವ್ಯಾಟಿಕನ್‌ನ ಸೇಂಟ್‌ ಪೀಟರ್ಸ್‌ ಸ್ಕ್ವೇರ್‌ನಲ್ಲಿ ನಡೆದ ವಿಶೇಷ ಸಾಮೂಹಿಕ ಪ್ರಾರ್ಥನೆಯಲ್ಲಿ ಪೋಪ್‌ ಅವರು ಬೇರೆ ಬೇರೆ ದೇಶಗಳ ಒಟ್ಟು  ಆರು ಮಂದಿಗೆ ಸಂತ ಪದವಿ ಪ್ರದಾನ ಮಾಡಿದರು. ಇವರಲ್ಲಿ ಇಬ್ಬರು ಭಾರತೀಯರು ಎನ್ನುವುದು ವಿಶೇಷ. ಈ ಮೂಲಕ ಸೀರೊ ಮಲಬಾರ್‌ ಕ್ಯಾಥೊಲಿಕ್‌ ಚರ್ಚ್‌ನ ಇತಿಹಾಸದಲ್ಲಿ ಸಂತ ಪದವಿ ಪಡೆದವರ ಸಂಖ್ಯೆ ಮೂರಕ್ಕೆ ಏರಿಕೆಯಾಗಿದೆ. 2008ರಲ್ಲಿ ಸಿಸ್ಟರ್‌ ಅಲ್ಫೊನ್ಸಾ ಅವರಿಗೆ ಸಂತ ಪದವಿ ನೀಡಲಾಗಿತ್ತು.

ಕೇರಳದಿಂದ ಆಗಮಿಸಿದ್ದ ಸಾವಿರಾರು ಕ್ಯಾಥೋಲಿಕರು  ಭಾನುವಾರ ವ್ಯಾಟಿಕನ್‌ನ ಸೇಂಟ್‌ ಪೀಟರ್ಸ್‌ ಸ್ಕ್ವೇರ್‌ನಲ್ಲಿ ನಡೆದ ಈ ವಿಶೇಷ ಕ್ಷಣಕ್ಕೆ ಸಾಕ್ಷಿಯಾದರು. ಭಾನುವಾರ ಕೇರಳದ ವಿವಿಧೆಡೆ ಚರ್ಚ್‌ಗಳಲ್ಲಿ ಫಾದರ್‌ ಕುರಿಯಾಕೋಸ್‌  ಚಾವರ, ಸಿಸ್ಟರ್‌ ಯುಫ್ರೇಸಿಯಾ ಅವರ ಹೆಸರಿನಲ್ಲಿ ವಿಶೇಷ ಪ್ರಾರ್ಥನೆಗಳು ನಡೆದವು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT