ADVERTISEMENT

ಗರ್ಭಿಣಿಯರಲ್ಲಿ ಮಧುಮೇಹ; ಮಗುವಿನ ಹೃದಯಕ್ಕೆ ಹಾನಿ

ಪಿಟಿಐ
Published 16 ಡಿಸೆಂಬರ್ 2017, 19:30 IST
Last Updated 16 ಡಿಸೆಂಬರ್ 2017, 19:30 IST

ನ್ಯೂಯಾರ್ಕ್‌: ಗರ್ಭ ಧರಿಸಿದ ಆರಂಭದ ಹಂತದಲ್ಲಿ ಕಂಡುಬರುವ ಮಧುಮೇಹದಿಂದಾಗಿ ಹುಟ್ಟುವ ಮಗುವಿನ ಹೃದಯಕ್ಕೆ ಹಾನಿಯಾಗುವ ಸಂಭವವಿರುತ್ತದೆ ಎಂದು ಅಮೆರಿಕದ ಸ್ಟ್ಯಾನ್‌ಫೋರ್ಡ್‌ ವಿಶ್ವವಿದ್ಯಾಲಯದ ಸ್ಕೂಲ್‌ ಆಫ್‌ ಮೆಡಿಸಿನ್‌ ವಿಭಾಗ ನಡೆಸಿದ ಅಧ್ಯಯನ ವರದಿ ತಿಳಿಸಿದೆ.

ಮೊದಲ ಮೂರು ತಿಂಗಳ ಅವಧಿಯಲ್ಲಿ ಮಧುಮೇಹ ಕಂಡುಬಂದ ಗರ್ಭಿಣಿಯರ ರಕ್ತದಲ್ಲಿರುವ ಗ್ಲುಕೋಸ್‌ ಪ್ರಮಾಣವನ್ನು ಪರೀಕ್ಷೆಗೆ ಒಳಪಡಿಸಿದಾಗ ಈ ಅಂಶ ಬೆಳಕಿಗೆ ಬಂದಿದೆ ಎಂದು ಸಂಶೋಧಕ ಜೇಮ್ಸ್‌ ಪ್ರೀಸ್ಟ್‌ ತಿಳಿಸಿದ್ದಾರೆ.

2009ರಿಂದ 2015ರ ಅವಧಿಯಲ್ಲಿ 19,107 ತಾಯಿ–ಮಕ್ಕಳ ಜೋಡಿಗಳ ವೈದ್ಯಕೀಯ ದಾಖಲೆಗಳನ್ನು ವಿಶ್ಲೇಷಿಸಲಾಗಿದೆ. 18,296 ಮಕ್ಕಳಲ್ಲಿ 811 ಮಕ್ಕಳಿಗೆ ಹೃದಯದ ತೊಂದರೆ ಇರುವುದು ಪತ್ತೆಯಾಗಿದೆ ಎಂದು ವರದಿ ತಿಳಿಸಿದೆ.

ADVERTISEMENT

ದಿ ಜರ್ನಲ್ ಆಫ್ ಪೀಡಿಯಾಟ್ರಿಕ್ಸ್‌ನಲ್ಲಿ ಈ ಕುರಿತ ಲೇಖನ ಪ್ರಕಟವಾಗಿದೆ. ತಾಯಿಯ ಪ್ರಸವಪೂರ್ವ ಆರೈಕೆ, ರಕ್ತ ಪರೀಕ್ಷೆಯ ಫಲಿತಾಂಶಗಳು ಮತ್ತು ಗರ್ಭಾವಸ್ಥೆಯಲ್ಲಿ ಅಥವಾ ಜನನದ ನಂತರ ಶಿಶುಗಳಿಗೆ ಮಾಡಿದ ಹೃದಯ ತಪಾಸಣೆಯ ವಿವರಗಳ ದಾಖಲೆಗಳ ಅಧ್ಯಯನ ನಡೆಸಲಾಗಿದೆ. ಅನುವಂಶಿಕ ಕಾಯಿಲೆ, ಬಹು ಗರ್ಭಧಾರಣೆಯಿಂದ ಹುಟ್ಟಿದ ಮಕ್ಕಳು, ತಾಯಿಯ ದೇಹದಲ್ಲಿ ನೀರಿನಂಶ ಕಡಿಮೆ ಇರುವುದು ಮುಂತಾದ ಪ್ರಕರಣಗಳನ್ನು ಅಧ್ಯಯನದಿಂದ ಹೊರಗಿಡಲಾಗಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.