ADVERTISEMENT

ಚರ್ಚೆಗೆ ಆಸ್ಪದ ನೀಡಿದ ಅಬಾಟ್‌ ಬಿಯರ್‌ ಪಾನ!

​ಪ್ರಜಾವಾಣಿ ವಾರ್ತೆ
Published 19 ಏಪ್ರಿಲ್ 2015, 19:30 IST
Last Updated 19 ಏಪ್ರಿಲ್ 2015, 19:30 IST

ಸಿಡ್ನಿ (ಎಎಫ್‌ಪಿ):  ಆಸ್ಟ್ರೇಲಿಯಾ ಪ್ರಧಾನಿ ಟೋನಿ ಅಬಾಟ್‌ ಅವರು ಒಂದೇ ಗುಟುಕಿಗೆ ಬಿಯರ್‌ ಕುಡಿಯುತ್ತಿರುವ ವಿಡಿಯೊ ಬಹಿರಂಗಗೊಂಡಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ಚರ್ಚೆಗೆ ಗ್ರಾಸವಾಗಿದೆ.

ಶನಿವಾರ ರಾತ್ರಿ ಈ ವಿಡಿಯೊ ಬಹಿರಂಗಗೊಂಡಿದ್ದು, ಪಬ್‌ವೊಂದರಲ್ಲಿ ಮಾಜಿ ಮುಖಂಡರೊಬ್ಬರಿಗೆ ಸವಾಲೆಸೆದು ಆರು ಸೆಕೆಂಡುಗಳಲ್ಲೇ ಒಂದೇ ಗುಟುಕಿಗೆ ಒಂದು ಗ್ಲಾಸ್‌ ಬಿಯರ್‌ ಕುಡಿಯುತ್ತಿರುವ ಮತ್ತು ಪ್ರಧಾನಿ ಸುತ್ತ ಬಾರಿ ಸಂಖ್ಯೆಯಲ್ಲಿ ಸೇರಿದ್ದ ಜನರು ಅವರನ್ನು ಹುರಿದುಂಬಿಸುತ್ತಿದ್ದ ದೃಶ್ಯ ವಿಡಿಯೊದಲ್ಲಿ ಸೆರೆಯಾಗಿದೆ.  ‘ಅಷ್ಟೇನು ಜನಪ್ರಿಯವಾಗಿಲ್ಲದ ಅಬಾಟ್‌, ತಮ್ಮನ್ನು ಎಲ್ಲರೂ ಇಷ್ಟಪಡಲೆಂದು ಹೀಗೆ ಒಂದೇ ಗುಟುಕಿನಲ್ಲಿ  ಬಿಯರ್‌ ಕುಡಿದಿರಬೇಕು’ ಎಂದು ವ್ಯಕ್ತಿಯೊಬ್ಬರು ಟ್ವೀಟ್‌ ಮಾಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.