ADVERTISEMENT

ಚೀನಾದಲ್ಲಿ ಬೆಂಕಿ ದುರಂತ: 38 ವೃದ್ಧರ ಸಾವು

​ಪ್ರಜಾವಾಣಿ ವಾರ್ತೆ
Published 26 ಮೇ 2015, 6:12 IST
Last Updated 26 ಮೇ 2015, 6:12 IST

ಬೀಜಿಂಗ್‌ (ಪಿಟಿಐ): ದಕ್ಷಿಣಾ ಚೀನಾದಲ್ಲಿನ ವೃದ್ಧಾಶ್ರಮವೊಂದರಲ್ಲಿ ಸಂಭವಿಸಿದ ಬೆಂಕಿ ದುರಂತದಲ್ಲಿ 38 ಜನರು ಮೃತಪಟ್ಟು ಆರು ಜರು ಗಂಭೀರವಾಗಿ ಗಾಯಗೊಂಡಿದ್ದಾರೆ.

ಇಲ್ಲಿನ ಹೆನಾನ್‌ ಪ್ರಾಂತ್ಯದ ಪಿಂಗ್‌ಡಿಂಗ್‌ಶಾನ್‌ ವಸತಿ ಸಮುಚ್ಛಯದಲ್ಲಿ ಸೋಮವಾರ ತಡ ರಾತ್ರಿ  ಅಗ್ನಿ ಅನಾಹುತ ಸಂಭವಿಸಿದೆ ಎಂದು ಚೀನಾದ ಸರ್ಕಾರಿ ಮಾಧ್ಯಮಗಳು ವರದಿ ಮಾಡಿವೆ.

ಈ ವಸತಿ ಸಮುಚ್ಛಯದಲ್ಲಿ ವೃದ್ಧರು ವಾಸ ಮಾಡುತ್ತಿದ್ದರು. ಬೆಂಕಿ ಅನಾಹುತದಲ್ಲಿ ಗಾಯಗೊಂಡವರನ್ನು ಸ್ಥಳಿಯ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಇವರುಲ್ಲಿ ಇಬ್ಬರ ಸ್ಥಿತಿ ಚಿಂತಾಜನಕವಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಅಪಾರ್ಟ್‌ಮೆಂಟ್‌ಗೆ ಬೆಂಕಿ ತಗುಲಿ ದಟ್ಟವಾದ ಹೊಗೆ ಕಂಡುಬಂದಾಗ ಸ್ಥಳೀಯರು ಅಗ್ನಿಶಾಮಕ ದಳಕ್ಕೆ ಕರೆ ಮಾಡಿದ್ದಾರೆ. ಅಗ್ನಿಶಾಮಕ ಸಿಬ್ಬಂದಿ ಸ್ಥಳಕೆ ಬರುವುದರೊಳಗೆ 30 ಜನರು ಬೆಂಕಿಗೆ ಆಹುತಿಯಾಗಿದ್ದರು ಎಂದು ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT