ADVERTISEMENT

ಜಾಕ್‌ ಡೊರ್ಸಿ ಟ್ವಿಟರ್‌ ಶಾಶ್ವತ ಸಿಇಒ

​ಪ್ರಜಾವಾಣಿ ವಾರ್ತೆ
Published 5 ಅಕ್ಟೋಬರ್ 2015, 13:17 IST
Last Updated 5 ಅಕ್ಟೋಬರ್ 2015, 13:17 IST

ನವದೆಹಲಿ (ಏಜೆನ್ಸೀಸ್‌): ಪ್ರಮುಖ ಸಾಮಾಜಿಕ ಜಾಲತಾಣ ಟ್ವಿಟರ್‌ನ ಶಾಶ್ವತ ಮುಖ್ಯ ಕಾರ್ಯನಿರ್ವಹಣಾಧಿಕಾರಿಯಾಗಿ (ಸಿಇಒ) ಜಾಕ್‌ ಡೊರ್ಸಿ ನೇಮಕಗೊಂಡಿದ್ದಾರೆ.

ಟ್ವಿಟರ್‌ ಸಿಇಒ ಆಗಿದ್ದ ಡಿಕ್‌ ಕೋಸ್ಟಲೊ ಅವರು ಜುಲೈ 1ರಂದು ತಮ್ಮ ಸ್ಥಾನದಿಂದ ಕೆಳಗಿಳಿದ ಬಳಿಕ ಜಾಕ್‌ ತಾತ್ಕಾಲಿಕ ಸಿಇಒ ಹುದ್ದೆಗೆ ನೇಮಿಕಗೊಂಡಿದ್ದರು.

ಟ್ವಿಟರ್‌ನ ಸಹ ಸಂಸ್ಥಾಪಕರಲ್ಲೊಬ್ಬರಾದ ಜಾಕ್‌ ಮೂರು ತಿಂಗಳ ಕಾಲ ತಾತ್ಕಾಲಿಕ ಸಿಇಒ ಆಗಿ ಕಾರ್ಯನಿರ್ವಹಿಸಿದ ಬಳಿಕ ಇದೀಗ ಸಂಸ್ಥೆಯ ಶಾಶ್ವತ ಸಿಇಒ ಆಗಿ ನೇಮಕಗೊಂಡಿದ್ದಾರೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.