ADVERTISEMENT
‘ಜೂಟೋಪಿಯಾ’ ಅತ್ಯುತ್ತಮ ಆ್ಯನಿಮೇಟೆಡ್‌ ಚಿತ್ರ
‘ಪೈಪರ್‌’ಗೆ ಪ್ರಶಸ್ತಿ
ಏಜೆನ್ಸೀಸ್
Published 27 ಫೆಬ್ರುವರಿ 2017, 10:29 IST
Last Updated 27 ಫೆಬ್ರುವರಿ 2017, 10:29 IST
‘ಜೂಟೋಪಿಯಾ’ ಅತ್ಯುತ್ತಮ ಆ್ಯನಿಮೇಟೆಡ್‌ ಚಿತ್ರ
‘ಜೂಟೋಪಿಯಾ’ ಅತ್ಯುತ್ತಮ ಆ್ಯನಿಮೇಟೆಡ್‌ ಚಿತ್ರ
ಲಾಸ್‌ ಏಂಜಲೀಸ್‌: ಮೊಲ ಮತ್ತು ನರಿಯ ಪಾತ್ರಗಳನ್ನು ಕೇಂದ್ರವಾಗಿಸಿ ಡಿಸ್ನಿ ನಿರ್ಮಿಸಿರುವ ‘ಜೂಟೋಪಿಯಾ’ ಅತ್ಯುತ್ತಮ ಆ್ಯನಿಮೇಟೆಡ್‌ ಚಿತ್ರ ಪ್ರಶಸ್ತಿ ಪಡೆದಿದೆ.
ಎಲ್ಲ ರೀತಿಯ ಪ್ರಾಣಿಗಳು ವಾಸಿಸುತ್ತಿರುವ ಪ್ರದೇಶದಲ್ಲಿ ಪೊಲೀಸ್‌ ಅಧಿಕಾರಿಯಾಗುವ ಕನಸು ಹೊತ್ತು ಬರುವ ಮೊಲ ಹಾಗೂ ಎದುರಾಗುವ ನರಿ. ಹೀಗೆ ಸಾಗುವ ಜೂಟೋಪಿಯಾ ಸಿನಿಮಾ ಅತ್ಯುತ್ತಮ ಆ್ಯನಿಮೇಟೆಡ್‌ ಚಿತ್ರವಾಗಿ ಹೊರಹೊಮ್ಮಿದೆ.
ಆ್ಯನಿಮೇಟೆಡ್‌ ಚಿತ್ರಗಳ ಕಿರುಚಿತ್ರ ವಿಭಾಗದಲ್ಲಿ ಪಿಕ್ಸರ್‌ ಆ್ಯನಿಮೇಷನ್‌ ಸ್ಟುಡಿಯೋಸ್‌ ನಿರ್ಮಿಸಿದರುವ ‘ಪೈಪರ್‌’  ಪ್ರಶಸ್ತಿಗೆ ಪಾತ್ರವಾಗಿದೆ.
ಹೊಸ ಶಾಲೆ, ಅಲ್ಲಿನ ಹಾಡುಗಾರರ ತಂಡ ಹಾಗೂ ವ್ಯವಸ್ಥೆಯ ಕಡಿವಾಣದಲ್ಲಿ ಸಿಲುಕು ಹಾಡುಗಾರಿಕೆಯ ಕಥೆಯಿರುವ ‘ಸಿಂಗ್‌’ಗೆ ಕಿರು ಚಿತ್ರ(ಲೈವ್‌ ಆಕ್ಷನ್‌) ವಿಭಾಗದಲ್ಲಿ ಪ್ರಶಸ್ತಿ ಸಂದಿದೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.
ADVERTISEMENT