ADVERTISEMENT

ಟರ್ಕಿ ದಾಳಿ: 11 ಸಾವು

​ಪ್ರಜಾವಾಣಿ ವಾರ್ತೆ
Published 26 ಆಗಸ್ಟ್ 2016, 19:30 IST
Last Updated 26 ಆಗಸ್ಟ್ 2016, 19:30 IST
ಟರ್ಕಿ ದಾಳಿ: 11 ಸಾವು
ಟರ್ಕಿ ದಾಳಿ: 11 ಸಾವು   

ಇಸ್ತಾಂಬುಲ್ (ಎಎಫ್‌ಪಿ): ಪೊಲೀಸ್ ಪ್ರಧಾನ ಕಚೇರಿ ಬಳಿ ಸಂಭವಿಸಿದ  ಆತ್ಮಾಹುತಿ ಟ್ರಕ್‌  ಬಾಂಬ್ ಸ್ಫೋಟದಲ್ಲಿ 11 ಮಂದಿ ಪೊಲೀಸ್ ಅಧಿಕಾರಿಗಳು ಮೃತಪಟ್ಟು, 78 ಮಂದಿ ಗಾಯಗೊಂಡ ಘಟನೆ  ಟರ್ಕಿಯ ಆಗ್ನೇಯ ಭಾಗದ ಸಿಜ್ರೆಯಲ್ಲಿ ಶುಕ್ರವಾರ ನಡೆದಿದೆ. ‘ಕುರ್ದಿಸ್ತಾನ್ ವರ್ಕರ್ಸ್ ಪಾರ್ಟಿ (ಪಿಕೆಕೆ) ಬಂಡುಕೋರರು  ಈ ದಾಳಿ ನಡೆಸಿದ್ದಾರೆ’ ಎಂದು ಅಧಿಕಾರಿಯೊಬ್ಬರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಬಾಂಬ್ ಸ್ಫೋಟದ ತೀವ್ರತೆಗೆ ಪೊಲೀಸ್  ಪ್ರಧಾನ ಕಚೇರಿ ನೆಲಕಚ್ಚಿದೆ. ‘ಮುಂಜಾನೆ 6.45ರ ಸುಮಾರಿಗೆ ಸ್ಫೋಟಕಗಳನ್ನು ತುಂಬಿಸಿಕೊಂಡಿದ್ದ ಟ್ರಕ್‌  ಅನ್ನು ಪೊಲೀಸ್ ಪ್ರಧಾನ ಕಚೇರಿಗೆ ನುಗ್ಗಿಸಲಾಗಿದೆ’ ಎಂದು ಪ್ರಾಂತೀಯ ಗವರ್ನರ್‌ ಕಚೇರಿ ಅಧಿಕಾರಿಯೊಬ್ಬರು ಹೇಳಿದ್ದಾರೆ. ಗಾಯಗೊಂಡವರಲ್ಲಿ  ಇಬ್ಬರ ಸ್ಥಿತಿ ಗಂಭೀರವಾಗಿದೆ ಎಂದು ಅಲ್ಲಿನ  ಸುದ್ದಿ ಸಂಸ್ಥೆಯೊಂದು ವರದಿ ಮಾಡಿದೆ. 

ರಿಸೆಪ್ ತೈಯಿಪ್‌ ಎರ್ಡೊಗನ್ ಅವರನ್ನು ಟರ್ಕಿ ಅಧ್ಯಕ್ಷ ಸ್ಥಾನದಿಂದ ಕೆಳಗಿಳಿಸಲು ಕಳೆದ ಜುಲೈ 15ರಂದು ನಡೆದ ಸೇನಾ ದಂಗೆಯಲ್ಲಿ  ಪಿಕೆಕೆ ಭಾಗಿಯಾಗಿತ್ತು. ಎರಡು ದಿನಗಳ ಹಿಂದೆ ಟರ್ಕಿಯ ಭದ್ರತಾ ಪಡೆಗಳು ನೆರೆಯ ಸಿರಿಯಾದ ಜಿಹಾದಿ ಮತ್ತು ಕುರ್ದಿಸ್‌ ಉಗ್ರರ ನಿರ್ನಾಮಕ್ಕೆ ಮುಂದಾಗಿದ್ದವು. ಇದಕ್ಕೆ ಪ್ರತೀಕಾರವಾಗಿ ಪಿಕೆಕೆ ಈ ದಾಳಿಮಾಡಿದೆ ಎಂದು ಅಧಿಕಾರಿಗಳು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.