ADVERTISEMENT

ಟ್ರಂಪ್‌ಗೆ ಒಬಾಮ ಎಚ್ಚರಿಕೆ

ಏಜೆನ್ಸೀಸ್
Published 17 ಜನವರಿ 2017, 19:30 IST
Last Updated 17 ಜನವರಿ 2017, 19:30 IST
ಟ್ರಂಪ್‌ಗೆ ಒಬಾಮ ಎಚ್ಚರಿಕೆ
ಟ್ರಂಪ್‌ಗೆ ಒಬಾಮ ಎಚ್ಚರಿಕೆ   

ವಾಷಿಂಗ್ಟನ್‌ : ಇರಾನ್‌ ಜತೆ ಅಮೆರಿಕ ಮಾಡಿಕೊಂಡಿರುವ ಅಣು ಒಪ್ಪಂದ ಮಹತ್ವದ್ದಾಗಿದ್ದು, ಅದನ್ನು ಕೈಬಿಡಬಾರದು ಎಂದು ಅಮೆರಿಕದ ಅಧ್ಯಕ್ಷ ಬರಾಕ್‌ ಒಬಾಮ ನಿಯೋಜಿತ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ಗೆ ಎಚ್ಚರಿಕೆ ನೀಡಿದ್ದಾರೆ.

ಇರಾನ್‌ ಜೊತೆಗೆ ಅಮೆರಿಕ ಮಾಡಿಕೊಂಡಿದ್ದ ಅಣು ಒಪ್ಪಂದದ ಮೊದಲ ವಾರ್ಷಿಕೋತ್ಸವದ ಸಂದರ್ಭದಲ್ಲಿ ಅದರ ಮಹತ್ವದ ಕುರಿತು ಒಬಾಮ ಮಾತನಾಡಿದರು.

‘ಅಮೆರಿಕ–ಇರಾನ್‌ ಅಣು ಒಪ್ಪಂದಕ್ಕೆ ವಿಶ್ವದ ವಿವಿಧ ದೇಶಗಳ ಬೆಂಬಲವಿದೆ. ಅನೇಕ ವರ್ಷಗಳ ಪ್ರಯತ್ನದ ಫಲವಾಗಿ   ಈ ಒಪ್ಪಂದ ಏರ್ಪಟ್ಟಿದೆ ಎಂಬುದನ್ನು ಅಮೆರಿಕ ನೆನಪಿನಲ್ಲಿಟ್ಟುಕೊಳ್ಳಬೇಕು. ಈ ಒಪ್ಪಂದದಿಂದಾಗಿ ಅಮೆರಿಕ ಮತ್ತು ವಿಶ್ವದಲ್ಲಿ ಶಾಂತಿ ನೆಲೆಸುವಂತಾಗಿದೆ. ಜತೆಗೆ ಇರಾನ್‌ ಅಣ್ವಸ್ತ್ರ ಹೊಂದದಂತೆ ತಡಯಲಾಗಿದೆ’ ಎಂದು ಒಬಾಮ ಅವರು ತಿಳಿಸಿದರು.

ಇರಾನ್‌, ಅಮೆರಿಕ, ಚೀನಾ, ರಷ್ಯಾ, ಬ್ರಿಟನ್‌, ಫ್ರಾನ್ಸ್‌ ಮತ್ತು ಜರ್ಮನಿ ದೇಶಗಳು ಜುಲೈ 2015ರಲ್ಲಿ ಈ ಒಪ್ಪಂದಕ್ಕೆ ಸಹಿ ಹಾಕಿದ್ದವು. ಟ್ರಂಪ್‌ ಅವರು ಈ ಹಿಂದೆ ಅನೇಕ ಬಾರಿ ಈ ಒಪ್ಪಂದವನ್ನು ಖಂಡಿಸಿದ್ದಾರೆ. ಭಾನುವಾರ ಲಂಡನ್‌ನ ‘ದಿ ಟೈಮ್ಸ್‌’ ಮತ್ತು ಜರ್ಮನಿಯ ‘ಬೈಲ್ಡ್‌’ ಪತ್ರಿಕೆಗೆ ನೀಡಿದ ಸಂದರ್ಶನದಲ್ಲಿ ‘ಈ ಒಪ್ಪಂದವು ನನಗೆ ಸಂತಸ ತಂದಿಲ್ಲ. ಇದು ಅತ್ಯಂತ ಕೆಟ್ಟ ಒಪ್ಪಂದಗಳಲ್ಲಿ ಒಂದು’ ಎಂದು ಹೇಳಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.