ADVERTISEMENT

ಟ್ರಂಪ್‌ ಅಧಿಕಾರ ಸ್ವೀಕಾರ ಸಮಾರಂಭ: ಜರ್ದಾರಿಗೆ ಆಹ್ವಾನ

ಪಿಟಿಐ
Published 16 ಜನವರಿ 2017, 19:30 IST
Last Updated 16 ಜನವರಿ 2017, 19:30 IST
ಟ್ರಂಪ್‌ ಅಧಿಕಾರ ಸ್ವೀಕಾರ ಸಮಾರಂಭ: ಜರ್ದಾರಿಗೆ ಆಹ್ವಾನ
ಟ್ರಂಪ್‌ ಅಧಿಕಾರ ಸ್ವೀಕಾರ ಸಮಾರಂಭ: ಜರ್ದಾರಿಗೆ ಆಹ್ವಾನ   

ಕರಾಚಿ : ಡೊನಾಲ್ಟ್‌ ಟ್ರಂಪ್‌ ಅವರು ಅಮೆರಿಕ ಅಧ್ಯಕ್ಷರಾಗಿ ಜ.20ರಂದು ಅಧಿಕಾರ ಸ್ವೀಕರಿಸಲಿದ್ದು, ಸಮಾರಂಭದಲ್ಲಿ ಪಾಲ್ಗೊಳ್ಳುವಂತೆ ಪಾಕಿಸ್ತಾನದ ಮಾಜಿ ಅಧ್ಯಕ್ಷ ಆಸಿಫ್‌ ಅಲಿ ಜರ್ದಾರಿ ಅವರಿಗೆ ಆಹ್ವಾನ ನೀಡಲಾಗಿದೆ.

ಜರ್ದಾರಿ ಆಹ್ವಾನವನ್ನು ಸ್ವೀಕರಿಸಿದ್ದು, ಮಂಗಳವಾರ ಅಮೆರಿಕ ಪ್ರಯಾಣ ಬೆಳೆಸಲಿದ್ದಾರೆ ಎಂದು ಡೈಲಿ ಟೈಮ್ಸ್‌ ವರದಿ ಮಾಡಿದೆ. 18ತಿಂಗಳ ಕಾಲ ಪಾಕಿಸ್ತಾನದಿಂದ ಹೊರಗೆ ಉಳಿದಿದ್ದ ಜರ್ದಾರಿ ಇತ್ತೀಚೆಗಷ್ಟೇ ದೇಶಕ್ಕೆ ಮರಳಿದ್ದರು.

ಅವರು ಅಮೆರಿಕಕ್ಕೆ ಹಿಂದೆ ಪಾಕಿಸ್ತಾನದ ರಾಯಭಾರಿಯಾಗಿ ಕೆಲಸ ಮಾಡಿದ್ದ ಶೆರ್ರಿ ರೆಹಮಾನ್‌ ಅವರನ್ನೂ ಒಳಗೊಂಡ ನಿಯೋಗದೊಂದಿಗೆ ಅಮೆರಿಕಕ್ಕೆ ತೆರಳಲಿದ್ದಾರೆ ಎಂದು ವರದಿ ತಿಳಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.