ADVERTISEMENT

ಟ್ರಂಪ್‌ ಗೆ ಮುಜುಗರ ತಂದ ಟ್ವೀಟ್‌

ಪಿಟಿಐ
Published 17 ಜನವರಿ 2017, 19:30 IST
Last Updated 17 ಜನವರಿ 2017, 19:30 IST
ಟ್ರಂಪ್‌ ಗೆ ಮುಜುಗರ ತಂದ ಟ್ವೀಟ್‌
ಟ್ರಂಪ್‌ ಗೆ ಮುಜುಗರ ತಂದ ಟ್ವೀಟ್‌   

ಲಂಡನ್‌ : ಅಮೆರಿಕದ ನಿಯೋಜಿತ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಅವರು ತಮ್ಮ ಪುತ್ರಿ ಇವಾಂಕಾ ಬಗ್ಗೆ ಬರೆದಿದ್ದಾರೆ ಎಂದು ಭಾವಿಸಿ ಟ್ವೀಟ್‌ ಒಂದಕ್ಕೆ ಮರು ಟ್ವೀಟ್‌ ಮಾಡಿ ಮುಜುಗರಕ್ಕೆ ಒಳಗಾಗಿದ್ದಾರೆ.

ಮೆಸಾಚುಸೆಟ್ಸ್‌ನ ಲಾರೆನ್ಸ್‌ ಗುಡ್‌ಸ್ಟೀನ್‌ ಎನ್ನುವವರು ‘ಇವಾಂಕಾ ಟ್ರಂಪ್‌ ನೈಜ ಕೀರ್ತಿ ಹೊಂದಿರುವ ಶ್ರೇಷ್ಠ ಮಹಿಳೆ’ ಎಂದು ಟ್ವೀಟ್‌ ಮಾಡಿದ್ದರು. ಆದರೆ @ಇವಾಂಕಾಂ ಟ್ರಂಪ್‌ ಬದಲಿಗೆ ಬ್ರಿಟನ್‌ನ @ಇವಾಂಕಾ ಎನ್ನುವ ಮಹಿಳೆಯ ಖಾತೆಯನ್ನು ಟ್ಯಾಗ್‌ ಮಾಡಿದ್ದರು. ಇದನ್ನು ಗಮನಿಸದ ಟ್ರಂಪ್‌ ಆ ಟ್ವೀಟ್‌ ತನ್ನ ಮಗಳ ಪರವಾಗಿ ಮಾಡಿದ್ದಾರೆ ಎಂದು ಭಾವಿಸಿ ಮರುಟ್ವೀಟ್‌ ಮಾಡಿದ್ದಾರೆ ಎಂದು ಟೆಲಿಗ್ರಾಫ್‌ ವರದಿ ಮಾಡಿದೆ.

ಟ್ರಂಪ್‌ ಅವರ ಟ್ವೀಟ್‌ಗೆ ಇಲ್ಲಿ ಉಲ್ಲೇಖಿತ ಮಹಿಳೆ ಇವಾಂಕಾ ಮಜಿಕ್‌ ಪ್ರತಿಕ್ರಿಯೆ ನೀಡಿಲ್ಲ. ಆದರೆ ಇದನ್ನು ಗಮನಿಸಿದ ಲೇಖಕರೊಬ್ಬರು, ‘ಹೌದು, ಇಂಗ್ಲೆಂಡ್‌ನ ಇವಾಂಕಾ ಮಜಿಕ್‌ ನಿಜವಾಗಿಯೂ ಶ್ರೇಷ್ಠ ಮಹಿಳೆ’ ಎಂದು ಪ್ರತಿಕ್ರಿಯೆ ನೀಡಿ ಟ್ರಂಪ್‌ಗೆ ಮುಜುಗರ ಉಂಟುಮಾಡಿದ್ದಾರೆ. ಟ್ರಂಪ್‌ ಸಂದೇಶ ಸುಮಾರು 4 ಸಾವಿರ ಬಾರಿ ಮರು ಟ್ವೀಟ್‌ ಆಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.