ADVERTISEMENT

ಟ್ರಂಪ್‌ ಮದುವೆ ಕೇಕ್‌ ಹರಾಜು

ಪಿಟಿಐ
Published 18 ನವೆಂಬರ್ 2017, 19:30 IST
Last Updated 18 ನವೆಂಬರ್ 2017, 19:30 IST
ಟ್ರಂಪ್‌ ಮದುವೆ ಕೇಕ್‌ ಹರಾಜು
ಟ್ರಂಪ್‌ ಮದುವೆ ಕೇಕ್‌ ಹರಾಜು   

ವಾಷಿಂಗ್ಟನ್‌ : ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಮತ್ತು ಮೆಲಾನಿಯಾ ಅವರ ಮದುವೆ ಸಂದರ್ಭದಲ್ಲಿ ತಯಾರಿಸಲಾಗಿದ್ದ ಕೇಕ್‌ ಅನ್ನು ಹರಾಜಿಗೆ ಇಡಲಾಗಿದೆ.

ಹರಾಜಿನ ಕನಿಷ್ಠ ಬಿಡ್‌ ₹ 16 ಸಾವಿರ ಎಂದು ನಿಗದಿಪಡಿಸಲಾಗಿದೆ.

ಟ್ರಂಪ್‌ ಮತ್ತು ಮಲಾನಿಯಾ ದಂಪತಿ 2005ರಲ್ಲಿ ತಮ್ಮ ಮದುವೆಯ ದಿನ ₹ 32.47 ಲಕ್ಷ ಮೌಲ್ಯದ ಏಳು ಹಂತದ ಕೇಕ್‌ ಕತ್ತರಿಸಿದ್ದರು ಎಂದು ಲಾಸ್‌ ಏಂಜಲೀಸ್‌ ಮೂಲದ ಜೂಲಿಯನ್ಸ್‌ ಹರಾಜು ಸಂಸ್ಥೆ ತಿಳಿಸಿದೆ.

ADVERTISEMENT

‘ಸುಮಾರು ಐದು ಅಡಿ ಉದ್ದದ ಕೇಕ್‌ ಅನ್ನು ಕ್ರೀಮ್‌ನಿಂದ ತಯಾರಿಸಲಾಗಿತ್ತು. ಜತೆಗೆ ಗುಲಾಬಿ ಮಾದರಿಗಳಿಂದ ಅಲಂಕರಿಸಲಾಗಿತ್ತು. ವೈರ್‌ಗಳ ಸಹಾಯದಿಂದ ಕೇಕ್‌ ಅನ್ನು ಬಿಗಿಯಾಗಿ ನಿಲ್ಲಿಸಲಾಗಿತ್ತು. ಈ ಕಾರಣ ಮದುವೆಗೆ ಬಂದಿದ್ದ ಅತಿಥಿಗಳು ಕೇಕ್‌ ತಿನ್ನಲು ಸಾಧ್ಯವಾಗಿರಲಿಲ್ಲ’ ಎಂದು ಸಂಸ್ಥೆ ಹೇಳಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.