ADVERTISEMENT

ಡೈನೊಸಾರ್‌ಗಳ ಸೃಷ್ಟಿಗೆ ತ್ರಿಡಿ ಪ್ರಿಂಟಿಂಗ್‌ ತಂತ್ರಜ್ಞಾನ

ಪಿಟಿಐ
Published 17 ಫೆಬ್ರುವರಿ 2017, 9:59 IST
Last Updated 17 ಫೆಬ್ರುವರಿ 2017, 9:59 IST
ಡೈನೊಸಾರ್‌ಗಳ ಸೃಷ್ಟಿಗೆ ತ್ರಿಡಿ ಪ್ರಿಂಟಿಂಗ್‌ ತಂತ್ರಜ್ಞಾನ
ಡೈನೊಸಾರ್‌ಗಳ ಸೃಷ್ಟಿಗೆ ತ್ರಿಡಿ ಪ್ರಿಂಟಿಂಗ್‌ ತಂತ್ರಜ್ಞಾನ   

ಮೆಲ್ಬೋರ್ನ್: ಸಂಜೆ ಅಥವಾ ಬೆಳ್ಳಂಬೆಳಗ್ಗೆ ವಿಹಾರಕ್ಕೆ ಹೊರಡುವಾಗ ನೆಚ್ಚಿನ ಶ್ವಾನ ಜತೆಯಾಗುವಂತೆ ‘ಡೈನೊಸಾರ್‌’ಗಳು ನಿಮ್ಮ ಹಿಂದೆಯೇ ಬರುವುದಾದರೇ?!

ಆಸ್ಟ್ರೇಲಿಯಾದ ಡೆಕಿನ್‌ ವಿಶ್ವವಿದ್ಯಾಲಯದ  ಸಂಶೋಧಕರು ತ್ರಿಡಿ ಪ್ರಿಂಟಿಂಗ್‌ ಮತ್ತು ವರ್ಚ್ಯುವಲ್‌ ರಿಯಾಲಿಟಿ ತಂತ್ರಜ್ಞಾನದ ಸಂಯೋಗದೊಂದಿಗೆ ಪ್ರಾಚೀನ ಕಾಲದ ದೈತ್ಯ ಜೀವಿಗಳನ್ನು ಸೃಷ್ಟಿಸುತ್ತಿದ್ದಾರೆ.

ಪ್ರಾಗ್ಜೀವಶಾಸ್ತ್ರ ಶೋಧನಾ ಕಾರ್ಯದಲ್ಲಿ ಆಸ್ಟ್ರೇಲಿಯಾದಲ್ಲಿ ದೊರೆತಿರುವ ಡೈನೊಸಾರ್‌ ಪಳೆಯುಳಿಕೆಯನ್ನು ಆಧುನಿಕ ತಂತ್ರಜ್ಞಾನದ ಸಹಕಾರದಲ್ಲಿ ತ್ರಿಡಿ ರೂಪ ನೀಡಲಾಗಿದೆ.

ADVERTISEMENT

10 ಕೋಟಿ ವರ್ಷಗಳನ್ನು ಹಿಂದಿನ ಜೀವಿಯನ್ನು ವಾಸ್ತವದಲ್ಲಿ ಕಾಣುವ ಜತೆಗೆ ಸ್ಪರ್ಶಿಸಲೂ ಸಾಧ್ಯವಾಗಿದೆ. ಇದರಿಂದ ಪ್ರಾಗ್ಜೀವಶಾಸ್ತ್ರ ಸಂಶೋಧಕರಿಗೂ ಅನುಕೂಲವಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.