ADVERTISEMENT

ತಂದೆಯಿಂದ ಮರ್ಯಾದಗೇಡು ಹತ್ಯೆ

ಪಿಟಿಐ
Published 23 ಸೆಪ್ಟೆಂಬರ್ 2017, 19:30 IST
Last Updated 23 ಸೆಪ್ಟೆಂಬರ್ 2017, 19:30 IST

ಪೇಶಾವರ: 20 ಹಾಗೂ 10 ವರ್ಷದ ಇಬ್ಬರು ಹೆಣ್ಣುಮಕ್ಕಳನ್ನು ತಂದೆಯೇ ಕೊಂದಿರುವುದು ಪಾಕಿಸ್ತಾನದಲ್ಲಿ ನಡೆದಿದೆ. ಇದೊಂದು ‘ಮರ್ಯಾದಾಗೇಡು ಹತ್ಯೆ’ ಎಂದು ಪೊಲೀಸರು ತಿಳಿಸಿದ್ದಾರೆ.

20 ವರ್ಷದ ಶಮೀಮ್‌ ಮತ್ತು 10 ವರ್ಷದ ನೊರೀನ್‌ ಕೊಂದಿರುವುದಾಗಿ ಅವರ ತಂದೆ ಅಬ್ದುಲ್‌ ಘನಿ ತಪ್ಪೊಪ್ಪಿಕೊಂಡಿದ್ದಾರೆ ಎಂದು ಉಪ ಪೊಲೀಸ್‌ ವರಿಷ್ಠಾಧಿಕಾರಿ ಫಜಲ್‌ ವಹೀದ್‌ ತಿಳಿಸಿದ್ದಾರೆ.

‘ಮನೆಬಿಟ್ಟು ಬೇಕಾಬಿಟ್ಟಿಯಾಗಿ ಹೊರಗೆ ತಿರುಗಾಡಲು ತೆರಳುತ್ತಿದ್ದ ಹೆಣ್ಣು ಮಕ್ಕಳ ವರ್ತನೆಯಿಂದ ಬೇಸತ್ತು ಈ ಕೃತ್ಯವೆಸಗಿದ್ದೇನೆ’ ಎಂದು ಅಬ್ದುಲ್‌ ಘನಿ ತಿಳಿಸಿರುವುದಾಗಿ ಪೊಲೀಸರು ತಿಳಿಸಿದ್ದಾರೆ.

ADVERTISEMENT

ಮರ್ಯಾದಾ ಹತ್ಯೆ ನಡೆಸುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವ ಪಾಕಿಸ್ತಾನ ಸಂಸತ್‌ ಕಳೆದ ವರ್ಷ ಹೊಸ ಕಾನೂನಿಗೆ ಒಪ್ಪಿಗೆ ಸೂಚಿಸಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.