ADVERTISEMENT

ದಾಖಲೆ ಮಾಡಲು ಹೋಗಿ ಸಂಕಷ್ಟಕ್ಕೆ ಸಿಲುಕಿದ ನವದಂಪತಿ

ಏಜೆನ್ಸೀಸ್
Published 22 ಸೆಪ್ಟೆಂಬರ್ 2017, 19:30 IST
Last Updated 22 ಸೆಪ್ಟೆಂಬರ್ 2017, 19:30 IST
ಮದುಮಗ ಮತ್ತು ಮದುಮಗಳು
ಮದುಮಗ ಮತ್ತು ಮದುಮಗಳು   

ಕೊಲೊಂಬೊ: ದಾಖಲೆಗಾಗಿ 3.2 ಕಿ.ಮೀ. ಉದ್ದದ ಸೀರೆಯುಟ್ಟು ಹಸೆಮಣೆ ಏರಿದ ಇಲ್ಲಿನ ಕ್ಯಾಂಡಿ ನಗರದ ಮದುಮಗಳು ಹಾಗೂ ಆಕೆಯ ಪತಿ ಈಗ ಸಂಕಷ್ಟಕ್ಕೆ ಸಿಲುಕಿದ್ದಾರೆ.

ಮದುಮಗಳು ಮದುಮಗನ ಜೊತೆ ಹೆಜ್ಜೆ ಹಾಕಿದರೆ, ಸುಮಾರು 250 ವಿದ್ಯಾರ್ಥಿನಿಯರು ಆಕೆಯ ಸೀರೆಯ ಸೆರಗನ್ನು ಹಿಡಿದು ರಸ್ತೆಯಲ್ಲಿ ನಡೆದಿದ್ದಾರೆ. ಇದು ವಿವಾದಕ್ಕೆ ಕಾರಣವಾಗಿದೆ.

‘100 ವಿದ್ಯಾರ್ಥಿನಿಯರನ್ನು ಮದುವೆ ಸಮಾರಂಭದಲ್ಲಿ ಹೂ ಹಂಚುವ ಕೆಲಸಕ್ಕೂ ಬಳಸಿಕೊಳ್ಳಲಾಗಿತ್ತು’ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ADVERTISEMENT

‘ಶ್ರೀಲಂಕಾದ ಮಧ್ಯ ಪ್ರಾಂತ್ಯದ ಮುಖ್ಯಮಂತ್ರಿ ಶರತ್‌ಏಕನಾಯಕ ಅವರು ಈ ಮದುವೆ ಸಮಾರಂಭದಲ್ಲಿ ಅತಿಥಿಯಾಗಿ ಪಾಲ್ಗೊಂಡಿದ್ದರು’ ಎಂದು ಮಾಧ್ಯಮಗಳು ವರದಿ ಮಾಡಿವೆ.

ಮದುಮಗಳ ಸೀರೆಯ ಸೆರಗು ಹಿಡಿದು ನಡೆದ ಶಾಲಾ ವಿದ್ಯಾರ್ಥಿನಿಯರು

ಈ ಕುರಿತು ತನಿಖೆ ನಡೆಸುವುದಾಗಿ ರಾಷ್ಟ್ರೀಯ ಮಕ್ಕಳ ಸಂರಕ್ಷಣಾ ಪ್ರಾಧಿಕಾರ(ಎನ್‌ಸಿಪಿಎ) ಹೇಳಿದೆ.

‘ವಿದ್ಯಾರ್ಥಿಗಳನ್ನು ಶಾಲಾ ಸಮಯದಲ್ಲಿ ಇಂತಹ ಸಮಾರಂಭಗಳಲ್ಲಿ ಬಳಸಿಕೊಳ್ಳುವುದು ಕಾನೂನಿಗೆ ವಿರುದ್ಧವಾಗಿದೆ. ಕಾನೂನು ಉಲ್ಲಂಘಿಸುವವರು 10 ವರ್ಷಗಳ ಜೈಲು ಶಿಕ್ಷೆ ಎದುರಿಸಬೇಕಾಗಬಹುದು’ ಎಂದು ಎನ್‌ಸಿಪಿಎ ಅಧ್ಯಕ್ಷರು ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.