ADVERTISEMENT

ಧರೆಗುರುಳಿದ ವಿದ್ಯುತ್‌ ಕಂಬ – ತಂತಿ ಸ್ಪರ್ಶಿಸಿ ಹಸುಗಳ ಸಾವು

​ಪ್ರಜಾವಾಣಿ ವಾರ್ತೆ
Published 23 ಮೇ 2018, 19:30 IST
Last Updated 23 ಮೇ 2018, 19:30 IST
ಧರೆಗುರುಳಿದ ವಿದ್ಯುತ್‌ ಕಂಬ – ತಂತಿ ಸ್ಪರ್ಶಿಸಿ ಹಸುಗಳ ಸಾವು
ಧರೆಗುರುಳಿದ ವಿದ್ಯುತ್‌ ಕಂಬ – ತಂತಿ ಸ್ಪರ್ಶಿಸಿ ಹಸುಗಳ ಸಾವು   

ನೆಲಮಂಗಲ: ಭಾರಿ ಮಳೆಯಿಂದ ವಿದ್ಯುತ್‌ ಕಂಬಗಳು ಧರೆಗುರುಳಿ,ತಂತಿ ಸ್ಪರ್ಶಿಸಿ ಮೂರು ಹಸುಗಳು ಸತ್ತಿವೆ.

ತಾಲ್ಲೂಕಿನ ಗೇರೇಹಳ್ಳಿ ಗ್ರಾಮದಲ್ಲಿ ವಿದ್ಯುತ್‌ ಕಂಬಗಳು ಧರೆಗುರುಳಿದ್ದು ಬೆಳಿಗ್ಗೆ ಮೇಯಲು ಹೋದ ಮೂರು ಹಸುಗಳು ತಂತಿಗೆ ಸ್ಪರ್ಶಿಸಿದ್ದ
ರಿಂದ ಸ್ಥಳದಲ್ಲೇ ಸಾವನ್ನಪ್ಪಿವೆ. ಗ್ರಾಮಸ್ಥರು ಬೆಸ್ಕಾಂ ಅಧಿಕಾರಿಗಳ ನಿರ್ಲಕ್ಷ್ಯದ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಮೃತ ಹಸುಗಳು ಕೃಷ್ಣಪ್ಪ ಅವರಿಗೆ ಸೇರಿದ್ದು. ಅವರ ಮಗ ರವಿ ಮಾತನಾಡಿ, ‘ಮಳೆಯಿಂದಾಗಿ ವಿದ್ಯುತ್‌ ಕಂಬಗಳು ಧರೆಗುರುಳುತ್ತಿದ್ದು
ಬೆಸ್ಕಾಂ ಅಧಿಕಾರಿಗಳು ದೂರು ಕೊಟ್ಟರೂ ಸ್ಪಂದಿಸುತ್ತಿಲ್ಲ. ಲೈನ್‌ಮನ್‌ಗಳು ಹಣ ಕೊಟ್ಟರೆ ಮಾತ್ರ ದುರಸ್ತಿ ಮಾಡುತ್ತಾರೆ. ಇದರ ಬಗ್ಗೆ ಮೇಲಧಿಕಾರಿಗಳಿಗೆ ದೂರು ಕೊಟ್ಟರೂ ಪ್ರಯೋಜನವಾಗಿಲ್ಲ’ ಎಂದು ದೂರಿದರು.

ADVERTISEMENT

ಪಶು ವೈದ್ಯಾಧಿಕಾರಿ ಚಿದಾನಂದಮೂರ್ತಿ ಮಾತನಾಡಿ, ‘ಹಸುಗಳಿಗೆ ವಿಮೆ ಮಾಡಿಸಿಕೊಂಡಿಲ್ಲ. ಹೀಗಾಗಿ ಸತ್ತ ಹಸುಗಳಿಗೆ ತಲಾ ₹10 ಸಾವಿರ ಪರಿಹಾರ ನೀಡುತ್ತೇವೆ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.