ADVERTISEMENT

ನಡೆದಾಡಿದರೆ ಮೊಬೈಲ್‌ ಚಾರ್ಜ್‌!

ಪಿಟಿಐ
Published 22 ಜುಲೈ 2017, 19:30 IST
Last Updated 22 ಜುಲೈ 2017, 19:30 IST

ವಾಷಿಂಗ್ಟನ್‌: ಸ್ಮಾರ್ಟ್‌ಫೋನ್‌, ಫಿಟ್‌ನೆಸ್‌ ಟ್ರ್ಯಾಕರ್ ಮೊದಲಾದವುಗಳನ್ನು ಮಾನವನ ಚಲನೆಯಿಂದಲೇ ಚಾರ್ಜ್‌ ಮಾಡಿಕೊಳ್ಳಬಹುದಾದ ಅತಿ ತೆಳುವಾದ ಉಪಕರಣವೊಂದನ್ನು ಭಾರತೀಯನೂ ಒಳಗೊಂಡಿರುವ ಇಲ್ಲಿನ ಸಂಶೋಧಕರ ತಂಡ ಅಭಿವೃದ್ಧಿಪಡಿಸಿದೆ.

‘ಬ್ಯಾಟರಿ ತಂತ್ರಜ್ಞಾನ ಮತ್ತು ಕಪ್ಪು ರಂಜಕದಿಂದ ನಿರ್ಮಿಸಿರುವ ಅತಿ ತೆಳುವಾದ ಪದರಗಳನ್ನು ಬಳಸಿರುವ ಈ ಉಪಕರಣವು ಮನುಷ್ಯರು ನಡೆದಾಡಿದಾಗ, ಬಾಗಿದಾಗ ಸಣ್ಣ ಪ್ರಮಾಣದಲ್ಲಿ ವಿದ್ಯುತ್‌ ಉತ್ಪಾದಿಸುತ್ತದೆ’ ಎಂದು ಸಂಶೋಧಕರು ತಿಳಿಸಿದ್ದಾರೆ.

‘ಭವಿಷ್ಯದಲ್ಲಿ ಪರಿಸರದಿಂದ ಮತ್ತು ನಮ್ಮ ಚಲನೆಯಿಂದಲೇ ನಾವು ಬಳಸುವ ಉಪಕರಣಗಳನ್ನು ಚಾರ್ಜ್‌ ಮಾಡಿಕೊಳ್ಳಬಹುದು’ ಎಂದು ಅಮೆರಿಕದ ವ್ಯಾಂಡರ್‌ಬಿಲ್ಟ್‌ ವಿಶ್ವವಿದ್ಯಾಲಯದ ಸಹಾಯಕ ಪ್ರಾಧ್ಯಾಪಕ ಕ್ಯಾರಿ ಪಿಂಟ್‌ ಹೇಳಿದ್ದಾರೆ.

ADVERTISEMENT

‘ಮಾನವನ ಚಲನೆಯ ಶಕ್ತಿಯನ್ನು ಬಳಸಿಕೊಳ್ಳುವ ಇತರ ವಿಧಾನಗಳಿಗೆ ಹೋಲಿಸಿದರೆ ಇದು ಹೆಚ್ಚು ಪ್ರಯೋಜನಕಾರಿ’ ಎಂದು ಅವರು ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.