ADVERTISEMENT

ನವಾಜ್‌ ಷರೀಫ್ ಕುಟುಂಬಕ್ಕೆ ಸಮನ್ಸ್‌ ಜಾರಿ

ಪಿಟಿಐ
Published 14 ಸೆಪ್ಟೆಂಬರ್ 2017, 20:14 IST
Last Updated 14 ಸೆಪ್ಟೆಂಬರ್ 2017, 20:14 IST
ನವಾಜ್‌ ಷರೀಫ್ ಕುಟುಂಬಕ್ಕೆ ಸಮನ್ಸ್‌ ಜಾರಿ
ನವಾಜ್‌ ಷರೀಫ್ ಕುಟುಂಬಕ್ಕೆ ಸಮನ್ಸ್‌ ಜಾರಿ   

ಇಸ್ಲಾಮಾಬಾದ್‌: ಭ್ರಷ್ಟಾಚಾರ ಪ್ರಕರಣಕ್ಕೆ ಸಂಬಂಧಿಸಿದಂತೆ ಸೆ.19ರೊಳಗೆ ಹಾಜರಾಗಬೇಕು ಎಂದು ಪಾಕಿಸ್ತಾನದ ಪದಚ್ಯುತ ಪ್ರಧಾನಿ ನವಾಜ್‌ ಷರೀಫ್‌ ಹಾಗೂ ಅವರ ಮಕ್ಕಳಿಗೆ ಭ್ರಷ್ಟಾಚಾರ ತಡೆ ನ್ಯಾಯಾಲಯವು ಗುರುವಾರ ಸಮನ್ಸ್‌ ಜಾರಿ ಮಾಡಿದೆ.

ಕಳೆದ ವಾರ ನವಾಜ್‌ ಷರೀಫ್, ಅವರ ಮಕ್ಕಳು ಹಾಗೂ ಹಣಕಾಸು ಸಚಿವ ಇಸಾಕ್‌ ದಾರ್‌ ಅವರ ವಿರುದ್ಧ ಭ್ರಷ್ಟಾಚಾರ ತಡೆ ನ್ಯಾಯಾಲಯವು ನಾಲ್ಕು ಪ್ರಕರಣಗಳನ್ನು ದಾಖಲು ಮಾಡಿತ್ತು.

ಅಜೀಜ್‌ ಸ್ಟೀಲ್‌ ಮಿಲ್‌, ಹಿಲ್‌ ಮೆಟಲ್‌ ಹಾಗೂ ಅವೆನ್‌ಫೀಲ್ಸ್‌ ಆಸ್ತಿ ಪ್ರಕರಣದಲ್ಲಿ ನಡೆದಿದೆ ಎನ್ನಲಾದ ಭ್ರಷ್ಟಾಚಾರ ಪ್ರಕರಣಕ್ಕೆ ಸಂಬಂಧಿಸಿದಂತೆ ಷರೀಫ್‌ ಮಕ್ಕಳಾದ ಮಾರ್ಯಮ್‌ ಹುಸೈನ್‌, ಅವರ ಅಳಿಯ ಮಹ್ಮದ್ ಸಫ್ದರ್‌ ಅವರು ಹಾಜರಾಗಬೇಕು ಎಂದು ಇಸ್ಲಾಮಾಬಾದ್‌ನಲ್ಲಿರುವ ನ್ಯಾಯಾಲಯವು ಸಮನ್ಸ್ ಜಾರಿ ಮಾಡಿದೆ.

ADVERTISEMENT

ಪನಾಮ ಪೇಪರ್ಸ್‌ ಹಗರಣಕ್ಕೆ ಸಂಬಂಧಿಸಿದಂತೆ ಜುಲೈ 28ರಂದು ಸುಪ್ರೀಂಕೋರ್ಟ್‌ ನೀಡಿದ ತೀರ್ಪಿನಲ್ಲಿಯೇ ಈ ಪ್ರಕರಣಗಳ ಬಗ್ಗೆ ಉಲ್ಲೇಖ ಮಾಡಲಾಗಿದೆ. ಪನಾಮ ಪ್ರಕರಣದಲ್ಲಿ ಷರೀಫ್ ಅವರು ತಪ್ಪಿತಸ್ಥ ಎಂದು ತೀರ್ಪು ನೀಡಿದ್ದರಿಂದ ಪ್ರಧಾನಿ ಸ್ಥಾನದಿಂದ ಪದಚ್ಯುತಗೊಂಡಿದ್ದರು.

ತಮ್ಮ ವಿರುದ್ಧದ ತೀರ್ಪನ್ನು ಮರುಪರಿಶೀಲಿಸಬೇಕು ಎಂದು ಷರೀಫ್ ಸಲ್ಲಿಸಿದ್ದ ಅರ್ಜಿಯನ್ನು ಸುಪ್ರೀಂಕೋರ್ಟ್‌ನ ಐವರು ನ್ಯಾಯಮೂರ್ತಿಗಳ ಪೀಠವು ಬುಧವಾರದಿಂದ ವಿಚಾರಣೆಗೆ ಕೈಗೆತ್ತಿಕೊಂಡಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.