ADVERTISEMENT

ನಿರ್ಬಂಧ ಮೀರಿ ರಾಕೆಟ್‌ ಬಿಟ್ಟ ಉತ್ತರ ಕೊರಿಯಾ

ವಿಶ್ವಸಂಸ್ಥೆಯ ನಿಷೇಧ ಉಲ್ಲಂಘನೆ

​ಪ್ರಜಾವಾಣಿ ವಾರ್ತೆ
Published 7 ಫೆಬ್ರುವರಿ 2016, 7:55 IST
Last Updated 7 ಫೆಬ್ರುವರಿ 2016, 7:55 IST
ನಿರ್ಬಂಧ ಮೀರಿ ರಾಕೆಟ್‌ ಬಿಟ್ಟ ಉತ್ತರ ಕೊರಿಯಾ
ನಿರ್ಬಂಧ ಮೀರಿ ರಾಕೆಟ್‌ ಬಿಟ್ಟ ಉತ್ತರ ಕೊರಿಯಾ   

ಸೋಲ್‌ (ಎಪಿ / ಏಜೆನ್ಸೀಸ್‌): ವಿಶ್ವಸಂಸ್ಥೆ ಹೇರಿರುವ ನಿರ್ಬಂಧವನ್ನು ಉಲ್ಲಂಘಿಸಿ ದೂರಗಾಮಿ ರಾಕೆಟ್‌ ಉಡಾವಣೆ ಮಾಡಿರುವ ಉತ್ತರ ಕೊರಿಯಾ, ಈ ಕಾರ್ಯದಲ್ಲಿ ‘ಸಂಪೂರ್ಣ ಯಶಸ್ಸು’ ಪಡೆದಿರುವುದಾಗಿ ಹೇಳಿಕೊಂಡಿದೆ.

ವಿಶ್ವಸಂಸ್ಥೆ ನಿರ್ಬಂಧ ವಿಧಿಸಿರುವುದು ಮಾತ್ರವಲ್ಲದೆ ಅಮೆರಿಕ ಸೇರಿದಂತೆ ಹಲವು ರಾಷ್ಟ್ರಗಳು ಅಣ್ವಸ್ತ್ರ ಪ್ರಯೋಗ ನಡೆಸದಂತೆ ಉತ್ತರ ಕೊರಿಯಾಗೆ ಎಚ್ಚರಿಕೆ ನೀಡಿವೆ. ಆದರೂ ಉತ್ತರ ಕೊರಿಯಾ ದೂರಗಾಮಿ ರಾಕೆಟ್‌ ಉಡಾವಣೆ ಮಾಡಿ ವಿಶ್ವ ಸಮುದಾಯಕ್ಕೆ ಸೆಡ್ಡು ಹೊಡೆದಿದೆ.

ನಿರ್ಬಂಧ ಮೀರಿ ಉತ್ತರ ಕೊರಿಯಾ ದೂರಗಾಮಿ ರಾಕೆಟ್‌ ಉಡಾವಣೆ ಮಾಡಿರುವುದನ್ನು ಅಮೆರಿಕ, ದಕ್ಷಿಣ ಕೊರಿಯಾ ಸೇರಿದಂತೆ ಹಲವು ರಾಷ್ಟ್ರಗಳು ಖಂಡಿಸಿವೆ.

ADVERTISEMENT

ಉತ್ತರ ಕೊರಿಯಾ ಜನವರಿ 6ರಂದುಜಲಜನಕ ಬಾಂಬ್‌ ಪರೀಕ್ಷೆ ನಡೆಸಿತ್ತು. ಈ ಪರೀಕ್ಷೆ ಕೂಡ ವಿಶ್ವ ಸಮುದಾಯದ ಟೀಕೆಗೆ ಗುರಿಯಾಗಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.