ADVERTISEMENT

ಪಟ್ಟಭದ್ರ ಹಿತಾಸಕ್ತಿಗಳಿಂದ ಭಾರತ ವಿಭಜನೆ: ರಾಹುಲ್

ಪಿಟಿಐ
Published 21 ಸೆಪ್ಟೆಂಬರ್ 2017, 19:30 IST
Last Updated 21 ಸೆಪ್ಟೆಂಬರ್ 2017, 19:30 IST
ಪಟ್ಟಭದ್ರ ಹಿತಾಸಕ್ತಿಗಳಿಂದ ಭಾರತ ವಿಭಜನೆ: ರಾಹುಲ್
ಪಟ್ಟಭದ್ರ ಹಿತಾಸಕ್ತಿಗಳಿಂದ ಭಾರತ ವಿಭಜನೆ: ರಾಹುಲ್   

ನ್ಯೂಯಾರ್ಕ್‌ : ಶಾಂತಿಯುತ ಮತ್ತು ಸಾಮರಸ್ಯದ ರಾಷ್ಟ್ರವೆಂದೇ ಜಾಗತಿಕವಾಗಿ ಖ್ಯಾತಿ ಪಡೆದಿರುವ ಭಾರತ ದೇಶವನ್ನು ಕೆಲವು ಪಟ್ಟಭದ್ರ ಹಿತಾಸಕ್ತಿಗಳು ವಿಭಜಿಸಲು ಹೊರಟಿವೆ ಎಂದು ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿ ಇಲ್ಲಿ ಟೀಕಿಸಿದರು.

ತಮ್ಮ ಅಮೆರಿಕದ ಪ್ರವಾಸದ ಕೊನೆಯ ದಿನವಾದ ಗುರುವಾರ, ರಾಹುಲ್ ಅವರು ಹೋಟೆಲ್‌ ಒಂದರಲ್ಲಿ ಸುಮಾರು ಎರಡು ಸಾವಿರ ಬೆಂಬಲಿಗರನ್ನು ಉದ್ದೇಶಿಸಿ ಮಾತನಾಡಿದರು.

‘ಜಾಗತಿಕ ಮಟ್ಟದಲ್ಲಿ ಭಾರತ ಶಾಂತಿಯುತ ಹಾಗೂ ಸೌಹಾರ್ದಯುತ ದೇಶವೆಂದು ಖ್ಯಾತಿ ಪಡೆದುಕೊಂಡಿದೆ. ಆದರೆ ಕೋಮುಶಕ್ತಿಗಳು ಇದನ್ನು ಹಾಳು ಮಾಡುತ್ತಿವೆ. ಇದರಿಂದಾಗಿ ವಿದೇಶಗಳಲ್ಲಿ ಕೂಡ ನಮ್ಮ ಖ್ಯಾತಿ ಹಾಳಾಗುತ್ತಿದೆ’ ಎಂದು ರಾಹುಲ್ ಹೇಳಿದರು.

ADVERTISEMENT

‘ವಿಶ್ವಮಟ್ಟದಲ್ಲಿ ಭಾರತಕ್ಕೆ ಬಹಳ ಗೌರವಯುತ ಸ್ಥಾನವಿದೆ. ವಿಶ್ವ ಬದಲಾಗುತ್ತಿದ್ದು, ಜನರು ಇಂದು ಭಾರತದತ್ತ ಮುಖ ಮಾಡಿ ನೋಡುತ್ತಿದ್ದಾರೆ. ವಿಶ್ವದಲ್ಲಿರುವ ಹಲವು ರಾಷ್ಟ್ರಗಳು ಇಂದು ಭಾರತದತ್ತ ನೋಡುತ್ತಿದ್ದು, 21ನೇ ಶತಮಾನಕ್ಕೆ ಭಾರತ ಉತ್ತರವಾಗಬಹುದು ಎಂದು ಹೇಳುತ್ತಿವೆ. ದೇಶದಲ್ಲಿ
ರುವ ಇಂತಹ ಪ್ರಬಲ ಆಸ್ತಿಯನ್ನು ನಾವು ಕಳೆದುಕೊಳ್ಳಬಾರದು’ ಎಂದರು.

‘ಅನಿವಾಸಿ ಭಾರತೀಯರು ನಮ್ಮ ದೇಶದ ಬೆನ್ನೆಲುಬು ಇದ್ದಂತೆ’ ಎಂದ ರಾಹುಲ್‌, ‘ಅನಿವಾಸಿ ಭಾರತೀಯರು ಹೊಸ ಹೊಸ ಆಲೋಚನೆಯೊಂದಿಗೆ ಮುಂದಕ್ಕೆ ಬರಬೇಕಿದೆ. ದೇಶವನ್ನು ಬದಲಾವಣೆಯತ್ತ ಕೊಂಡೊಯ್ಯಬೇಕಿದೆ ಎಂದು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.