ADVERTISEMENT

ಪಾಕಿಸ್ತಾನಕ್ಕಿಂತ ಭಾರತದಲ್ಲೇ ಹೆಚ್ಚು ಉಗ್ರ ಕೃತ್ಯಗಳು ನಡೆದಿವೆ: ಅಮೆರಿಕ ಇಲಾಖೆ ವರದಿ

ಪಿಟಿಐ
Published 24 ಜುಲೈ 2017, 12:34 IST
Last Updated 24 ಜುಲೈ 2017, 12:34 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ವಾಷಿಂಗ್ಟನ್‌: ಭಾರತದಲ್ಲಿ ಪಾಕಿಸ್ತಾನಕ್ಕಿಂತಲೂ ಹೆಚ್ಚು ಪ್ರಮಾಣದ ಉಗ್ರರ ದಾಳಿ ಪ್ರಕರಣಗಳು ಬೆಳಕಿಗೆ ಬಂದಿವೆ ಎಂದು ಅಮೆರಿಕದ ಇಲಾಖೆಯೊಂದು ವರದಿ ಮಾಡಿದೆ. 2016ರಲ್ಲಿ ಅತಿಹೆಚ್ಚು ಉಗ್ರರ ದಾಳಿ ದಾಳಿಗೊಳಗಾದ ರಾಷ್ಟ್ರಗಳ ಪಟ್ಟಿಯಲ್ಲಿ ಭಾರತ, ಪಾಕಿಸ್ತಾನ ಕ್ರಮವಾಗಿ 3 ಮತ್ತು 4ನೇ ಸ್ಥಾನದಲ್ಲಿ ಕಾಣಿಸಿಕೊಂಡಿವೆ.

ವಿವಿಧ ದೇಶಗಳಲ್ಲಿ ನಡೆದ ಭಯೋತ್ಪಾದನಾ ಕೃತ್ಯಗಳ ಕುರಿತು ತಯಾರಿಸಲಾಗಿರುವ ವರದಿಯಲ್ಲಿ ಇರಾಕ್‌ ಮೊದಲ ಸ್ಥಾನದಲ್ಲಿದೆ. ಇಲ್ಲಿ ಒಟ್ಟು 2,965 ಪ್ರಕರಣಗಳು ಬೆಳಕಿಗೆ ಬಂದಿವೆ. ಎರಡನೇ ಸ್ಥಾನದಲ್ಲಿರುವ ಅಫ್ಗಾನಿಸ್ತಾನದಲ್ಲಿ 1,340 ದಾಳಿಗಳು ನಡೆದಿವೆ. ಭಾರತದಲ್ಲಿ 927 ಹಾಗೂ ಪಾಕಿಸ್ತಾದಲ್ಲಿ 734 ಪ್ರಕರಣಗಳು ದಾಖಲಾಗಿವೆ.

ಭಾರತದಲ್ಲಿ ದಾಖಲಾಗಿರುವ ಒಟ್ಟು ಪ್ರಕರಣಗಳಲ್ಲಿ ಶೇ.19ರಷ್ಟು ಜಮ್ಮು ಕಾಶ್ಮೀರದಲ್ಲಿ, ಶೇ.18ರಷ್ಟು ಛತ್ತೀಸ್‌ಗಢದಲ್ಲಿ, ಶೇ.12 ರಷ್ಟು ಮಣಿಪುರದಲ್ಲಿ ಮತ್ತು ಶೇ.10 ಪ್ರಕರಣಗಳು ಜಾರ್ಖಂಡ್‌ನಲ್ಲಿ ಕಂಡು ಬಂದಿವೆ.

ADVERTISEMENT

ಭಾರತದಲ್ಲಿ ಉಗ್ರರ ಕೃತ್ಯಗಳ ಪ್ರಮಾಣ ಶೇ.16 ರಷ್ಟು ಹೆಚ್ಚಾಗಿದ್ದು ಸಾವಿನ ಪ್ರಮಾಣವೂ ಶೇ.17ರಷ್ಟಕ್ಕೆ ಹೆಚ್ಚಳಗೊಂಡಿದೆ ಎಂದು ವರದಿಯಲ್ಲಿ ಉಲ್ಲೇಖಿಸಲಾಗಿದೆ.

ವರದಿಯಲ್ಲಿ, 2016ರಲ್ಲಿ ದೇಶದಾದ್ಯಂತ ಸಂಭವಿಸಿರುವ ಶೇ.73ರಷ್ಟು ದಾಳಿಗಳ ವೇಳೆ ಸಾವು ಸಂಭವಿಸಿಲ್ಲ ಎಂದೂ ಹೇಳಲಾಗಿದೆ. ಜತೆಗೆ ಜಗತ್ತಿನಲ್ಲಿ ಸಂಭವಿಸಿರುವ ಪ್ರತಿ ದಾಳಿಯ ವೇಳೆ ಮೃತಪಟ್ಟವರ ಪ್ರಮಾಣ ಸರಾಸರಿ 2.4ರಷ್ಟಿದ್ದು, ಈ ಪ್ರಮಾಣ ದೇಶದಲ್ಲಿ 0.4 ನಷ್ಟಿದೆ ಎನ್ನಲಾಗಿದೆ.

ಶೇ.47ರಷ್ಟು ದಾಳಿಗಳ ವೇಳೆ ಸ್ಪೋಟಕಗಳನ್ನು, ಶೇ.18ರಷ್ಟು ದಾಳಿಗಳಲ್ಲಿ ಶಸ್ತ್ರಾಸ್ತ್ರಗಳನ್ನು ಬಳಸಲಾಗಿದೆ ಎಂದೂ ಉಲ್ಲೇಖಿಸಲಾಗಿದ್ದು, 2015ರಲ್ಲಿ ಇರಾಕ್‌(2,418), ಅಫ್ಗಾನಿಸ್ತಾನ(1,708), ಪಾಕಿಸ್ತಾನ(1009) ದೇಶಗಳು ಕ್ರಮವಾಗಿ ಮೊದಲ ಮೂರು ಸ್ಥಾನಗಳಲ್ಲಿದ್ದವು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.