ADVERTISEMENT

ಪೋವೆಲ್‌ ರಾಜೀನಾಮೆ: ಅಮೆರಿಕ ಸ್ಪಷ್ಟನೆ

​ಪ್ರಜಾವಾಣಿ ವಾರ್ತೆ
Published 1 ಏಪ್ರಿಲ್ 2014, 9:24 IST
Last Updated 1 ಏಪ್ರಿಲ್ 2014, 9:24 IST

ಅಮೆರಿಕ ರಾಯಭಾರಿ ನ್ಯಾನ್ಸಿ ಪೋವೆಲ್‌ ಅವರ ದಿಢೀರ್‌ ರಾಜೀನಾಮೆ ಭಾರತ ಮತ್ತು ಅಮೆರಿಕ ನಡುವೆ ಉಂಟಾಗಿರುವ ರಾಜತಾಂತ್ರಿಕ  ಭಿನ್ನಾಬಿಪ್ರಾಯಕ್ಕೆ ತೆಪೆ ಹಾಕುವ ಪ್ರಯತ್ನ ಎಂದು ಬಿಂಬಿಸಬೇಕಾಗಿಲ್ಲ ಎಂದು ಅಮೆರಿಕ ಮಂಗಳವಾರ ಸ್ಪಷ್ಟಪಡಿಸಿದೆ.

ಭಾರತದಲ್ಲಿರುವ ಅಮೆರಿಕದ ರಾಯಭಾರಿ ಸೋಮವಾರ ದಿಢೀರ್‌ ರಾಜೀನಾಮೆ ನೀಡಿದ್ದರು. ಈ ಬೆಳವಣಿಗೆಯಿಂದ ದೇವಯಾನಿ ಪ್ರಕರಣದಲ್ಲಿ ಉಂಟಾಗಿದ್ದ ಉಭಯ ದೇಶಗಳ ನಡುವಿನ ವೈಮನಸ್ಸನ್ನು ಶಮನಗೊಳಿಸಲು ಅಮೆರಿಕ ಈ ಕ್ರಮ ಕೈಗೊಂಡಿದೆ ಎಂದೇ ಮಾಧ್ಯಮಗಳು ವರದಿ ಮಾಡಿದ್ದವು.

ಮಾಧ್ಯಮಗಳಲ್ಲಿ ವರದಿಯಾಗಿರುವಂತೆ ಅಮೆರಿಕ ಮತ್ತು ಭಾರತದ ನಡುವೆ ಯಾವುದೇ ವೈಮನಸ್ಸು ಉಂಟಾಗಿಲ್ಲ. ಪೋವೆಲ್‌ ರಾಜೀನಾಮೆ ವಿಚಾರ ಫೆಡರಲ್‌ ಸರ್ಕಾರದ ನಿರ್ಧಾರಕ್ಕೆ ಬಿಟ್ಟಿದ್ದು ಎಂದು ಶ್ವೇತಭವನದ ಮೂಲಗಳು ತಿಳಿಸಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.