ADVERTISEMENT

ಪ್ಯಾರಿಸ್‌ನಲ್ಲಿ ಮೋದಿ– ಷರೀಫ್ ಹಸ್ತಲಾಘವ

ಹವಾಮಾನ ವೈಪರೀತ್ಯ ಶೃಂಗಸಭೆ ಅಂಗವಾಗಿ ನಡೆದ ಭೇಟಿ

​ಪ್ರಜಾವಾಣಿ ವಾರ್ತೆ
Published 30 ನವೆಂಬರ್ 2015, 11:29 IST
Last Updated 30 ನವೆಂಬರ್ 2015, 11:29 IST

ಪ್ಯಾರಿಸ್ (ಐಎಎನ್‌ಎಸ್): ಫ್ರಾನ್ಸ್ ರಾಜಧಾನಿ ಪ್ಯಾರಿಸ್‌ನಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಪಾಕಿಸ್ತಾನ ಪ್ರಧಾನಿ ನವಾಜ್ ಷರೀಫ್ ಅವರನ್ನು ಸೋಮವಾರ ಭೇಟಿಯಾದರು.

ಇಲ್ಲಿ ನಡೆಯುತ್ತಿರುವ 21ನೇ ಹವಾಮಾನ ವೈಪರೀತ್ಯ ಶೃಂಗಸಭೆಯ (ಸಿಒಪಿ) ಅಂಗವಾಗಿ ಉಭಯ ರಾಷ್ಟ್ರಗಳ ನಾಯಕರು ಪರಸ್ಪರ ಕೈಕುಲುಕಿದರು.

‘21ನೇ ಸಿಒಪಿ ಅಂಗವಾಗಿ ಪ್ರಧಾನಿ ನರೇಂದ್ರ ಮೋದಿ ಅವರು ಪಾಕಿಸ್ತಾನ ಪ್ರಧಾನಿ ನವಾಜ್ ಷರೀಫ್ ಅವರನ್ನು ಭೇಟಿ ಮಾಡಿದರು’ ಎಂದು ವಿದೇಶಾಂಗ ಇಲಾಖೆಯು ವಕ್ತಾರ ವಿಕಾಸ್ ಸ್ವರೂಪ್ ಅವರು ಉಭಯ ನಾಯಕರು ಹಸ್ತಲಾಘವ ಮಾಡುತ್ತಿರುವ ಚಿತ್ರದ ಸಹಿತವಾಗಿ  ಟ್ವೀಟ್ ಮಾಡಿದ್ದಾರೆ.

ADVERTISEMENT

ಇದಕ್ಕೂ ಮೊದಲು ಮೋದಿ ಅವರನ್ಜು ಫ್ರಾನ್ಸ್ ಅಧ್ಯಕ್ಷ ಫ್ರಾಂಸ್ವಾ ಒಲಾಂಡ್ ಅವರು ಅದ್ದೂರಿಯಾಗಿ ಶೃಂಗಸಭೆಗೆ ಆಹ್ವಾನಿಸಿದರು.

‘ನವೆಂಬರ್‌ನ ಚುಮುಚುಮು ಚಳಿಯ ಮುಂಜಾನೆಯಲ್ಲಿ ಮೋದಿ ಅವರನ್ನು ಅಧ್ಯಕ್ಷ ಒಲಾಂಡೆ ಅವರು ಸ್ವಾಗತಿಸಿದರು’ ಎಂದು ಸ್ವರೂಪ್ ಅವರು ಮತ್ತೊಂದು ಟ್ವೀಟ್‌ನಲ್ಲಿ ತಿಳಿಸಿದ್ದಾರೆ.

12 ದಿನಗಳ ಶೃಂಗಸಭೆ ಭಾನುವಾರ ಇಲ್ಲಿಗೆ ಬಂದಿರುವ ಪ್ರಧಾನಿ ಮೋದಿ, ಅಮೆರಿಕ ಅಧ್ಯಕ್ಷ ಬರಾಕ್ ಒಬಾಮ ಸೇರಿದಂತೆ ಹಲವು ರಾಷ್ಟ್ರಗಳ ನಾಯಕರೊಂದಿಗೆ ಮಾತುಕತೆ ನಡೆಸುವ ನಿರೀಕ್ಷೆಗಳಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.