ADVERTISEMENT

ಪ್ಯಾರಿಸ್‌: ಗುಂಡಿನ ದಾಳಿಗೆ ಪತ್ರಕರ್ತರ ಬಲಿ

​ಪ್ರಜಾವಾಣಿ ವಾರ್ತೆ
Published 7 ಜನವರಿ 2015, 14:03 IST
Last Updated 7 ಜನವರಿ 2015, 14:03 IST
ಪ್ಯಾರಿಸ್‌ನ ‘ಚಾರ್ಲಿ ಹೆಬ್ಡೊ’ ಪತ್ರಿಕಾ ಕಚೇರಿಯಲ್ಲಿ ಬುಧವಾರ ನಡೆದ ಗುಂಡಿನ ದಾಳಿಯಲ್ಲಿ ಗಾಯಗೊಂಡವರನ್ನು ರಕ್ಷಣಾ ತಂಡದ ಸಿಬ್ಬಂದಿ ಆಸ್ಪತ್ರೆಗೆ ಸಾಗಿಸಿದರು  – ಎಪಿ ಚಿತ್ರ
ಪ್ಯಾರಿಸ್‌ನ ‘ಚಾರ್ಲಿ ಹೆಬ್ಡೊ’ ಪತ್ರಿಕಾ ಕಚೇರಿಯಲ್ಲಿ ಬುಧವಾರ ನಡೆದ ಗುಂಡಿನ ದಾಳಿಯಲ್ಲಿ ಗಾಯಗೊಂಡವರನ್ನು ರಕ್ಷಣಾ ತಂಡದ ಸಿಬ್ಬಂದಿ ಆಸ್ಪತ್ರೆಗೆ ಸಾಗಿಸಿದರು – ಎಪಿ ಚಿತ್ರ   

ಪ್ಯಾರಿಸ್‌ (ಐಎಎನ್‌ಎಸ್‌): ಫ್ರೆಂಚ್‌ ವಿಡಂಬನಾತ್ಮಕ ವಾರಪತ್ರಿಕೆ ‘ಚಾರ್ಲಿ ಹೆಬ್ಡೊ’ ಕಚೇರಿಯಲ್ಲಿ ಬುಧವಾರ ಇಬ್ಬರು ಮುಸುಕುಧಾರಿಗಳು ನಡೆಸಿದ ಗುಂಡಿನ ದಾಳಿಯಲ್ಲಿ ಪತ್ರಿಕೆಯ ಪ್ರಧಾನ ಸಂಪಾದಕ, ನಾಲ್ವರು ವ್ಯಂಗ್ಯಚಿತ್ರಕಾರರು ಸೇರಿದಂತೆ 12 ಮಂದಿ ಸಾವನ್ನಪ್ಪಿದ್ದು, ಕನಿಷ್ಠ 10 ಮಂದಿ ಗಾಯಗೊಂಡಿದ್ದಾರೆ.

‘ಚಾರ್ಲಿ ಹೆಬ್ಡೊ’ ಪತ್ರಿಕೆಯಲ್ಲಿ ಪ್ರವಾದಿ ಮಹಮ್ಮದ್‌ ಅವರನ್ನು ಅವಹೇಳನಕಾರಿಯಾಗಿ ಬಣ್ಣಿಸಿದ್ದ ಕಾರಣಕ್ಕೆ ಮುಸುಕುಧಾರಿಗಳು ಈ ದಾಳಿ ನಡೆಸಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

ದಾಳಿ ನಡೆಯುವ ಒಂದು ಗಂಟೆಗೂ ಮುನ್ನಾ ಐಎಸ್ ಮುಖ್ಯಸ್ಥ ಅಬೂಬಕರ್ ಅಲ್‌ಬಗ್ದಾದಿ ವ್ಯಂಗ್ಯ ಚಿತ್ರವೊಂದನ್ನು ಪತ್ರಿಕೆಯು ಟ್ವೀಟ್‌ ಮಾಡಿತ್ತು.

ADVERTISEMENT

ಗುಂಡಿನ ದಾಳಿ ನಡೆಸಿದ ಬಳಿಕ ‘ಪ್ರತೀಕಾರ ತೀರಿತು’ ಎಂಬ ಘೋಷಣೆಗಳನ್ನು ಕೂಗುತ್ತಾ, ವಾಹನ ನಿಲುಗಡೆ ಪ್ರದೇಶದಿಂದ ಕಪ್ಪು ಬಣ್ಣದ ಕಾರಿನಲ್ಲಿ ದುಷ್ಕರ್ಮಿಗಳು ಪರಾರಿಯಾಗಿದರು ಎಂದು ಪ್ರತ್ಯಕ್ಷದರ್ಶಿಗಳು ಹೇಳಿದ್ದಾರೆ.

‘ಚಾರ್ಲಿ ಹೆಬ್ಡೊ’ ಪತ್ರಿಕೆಯಲ್ಲಿ 2011ರಲ್ಲಿ ಪ್ರವಾದಿ ಮಹಮ್ಮದ್‌ ಅವರ ಬಗ್ಗೆ ವ್ಯಂಗ್ಯ ಚಿತ್ರ ಪ್ರಕಟವಾಗಿದ್ದ ಮರುದಿನ ಕಚೇರಿಯ ಮೇಲೆ ಬಾಂಬ್‌ ದಾಳಿ ನಡೆದಿತ್ತು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.