ADVERTISEMENT

ಪ್ಯಾರಿಸ್ ಒಪ್ಪಂದ ಹಿಂದೆ ಸರಿಯದಿರಿ

ಪಿಟಿಐ
Published 25 ಮೇ 2017, 19:30 IST
Last Updated 25 ಮೇ 2017, 19:30 IST

ವಾಷಿಂಗ್ಟನ್ : ಪ್ಯಾರಿಸ್ ಹವಾಮಾನ ಒಪ್ಪಂದದಿಂದ ಹಿಂದೆ ಸರಿಯದಂತೆ ಡೆಮಾಕ್ರಟಿಕ್ ಪಕ್ಷದ 36 ಸಂಸದರು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರನ್ನು ಒತ್ತಾಯಿಸಿದ್ದಾರೆ.

‘ಜಿ–7’ ಶೃಂಗಸಭೆಗೆ ಒಂದು ವಾರ ಇರುವಾಗ ಈ ವಿಚಾರ ಪ್ರಸ್ತಾಪಿಸಿರುವ ಸಂಸದರು, ‘ಹಸಿರುಮನೆ ತ್ಯಾಜ್ಯ ಹೊರಸೂಸುವ ಪ್ರಮುಖ ರಾಷ್ಟ್ರಗಳಾದ ಭಾರತ ಮತ್ತು ಚೀನಾ ಸೇರಿದಂತೆ ಅನೇಕ ದೇಶಗಳು ಐತಿಹಾಸಿಕ ಹವಾಮಾನ ಬದಲಾವಣೆ ಒಪ್ಪಂದಕ್ಕೆ ಬದ್ಧವಾಗಿವೆ.  ಒಪ್ಪಂದ ಮುರಿದರೆ ಬೇರೆ ರಾಷ್ಟ್ರಗಳಿಂದ ಭಿನ್ನವಾಗಿ ಉಳಿಯುವ ಅಮೆರಿಕ ಏಕಾಂಗಿಯಾಗಬೇಕಾಗುತ್ತದೆ’ ಎಂದು ವಾದಿಸಿದ್ದಾರೆ.

‘ಬೇರೆ ರಾಷ್ಟ್ರಗಳು ಮೂಲಸೌಕರ್ಯ ಅಭಿವೃದ್ಧಿ, ಕಡಿಮೆ ಇಂಗಾಲ ಸೂಸುವ ಇಂಧನ, ಸುಸ್ಥಿರ ಕೃಷಿ ಮತ್ತು ಹೊಸ ತಂತ್ರಜ್ಞಾನ ಅಭಿವೃದ್ಧಿಗೆ ಹೆಚ್ಚಿನ ಬಂಡವಾಳ ಹೂಡುತ್ತಿವೆ. ಈ ಸಂದರ್ಭದಲ್ಲಿ ಒಪ್ಪಂದದಿಂದ ಹಿಂದೆ ಸರಿದರೆ ಅದು ಅಮೆರಿಕದ ಆರೋಗ್ಯ ಮತ್ತು ರಕ್ಷಣಾ ಕ್ಷೇತ್ರದ ಮೇಲೆ ಪರಿಣಾಮ ಬೀರಲಿದೆ’ ಎಂದು ಅವರು ಎಚ್ಚರಿಸಿದ್ದಾರೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.