ADVERTISEMENT

ಪ್ರೇಮ ಮೂಡಲು ಇ-ಮೇಲ್‌ ಉತ್ತಮ

​ಪ್ರಜಾವಾಣಿ ವಾರ್ತೆ
Published 3 ಸೆಪ್ಟೆಂಬರ್ 2015, 19:32 IST
Last Updated 3 ಸೆಪ್ಟೆಂಬರ್ 2015, 19:32 IST

ವಾಷಿಂಗ್ಟನ್ (ಪಿಟಿಐ): ಧ್ವನಿಮುದ್ರಿತ ಕರೆ (ವಾಯ್ಸ್‌ ಮೇಲ್‌) ಅಥವಾ ದೂರವಾಣಿ ಕರೆಗಿಂತ ಅಕ್ಷರ ಸಂದೇಶದ ಇ- ಮೇಲ್‌ಗಳು ಹೆಚ್ಚು ಆತ್ಮೀಯತೆಯನ್ನು ಉಂಟು ಮಾಡುತ್ತವೆ ಎಂದು ಹೊಸ ಸಂಶೋಧನೆಯೊಂದು ಬಹಿರಂಗ ಮಾಡಿದೆ. ಇದು ಈ ಹಿಂದಿನ ಸಂಶೋಧನೆಗೆ ವಿರುದ್ಧವಾಗಿದೆ. ಈ ಮೊದಲಿನ ಸಂಶೋಧನೆಯಲ್ಲಿ, ಮತ್ತೊಬ್ಬರೊಂದಿಗೆ ಸಂಬಂಧ ಕುದುರಿಸಲು ವಾಯ್ಸ್‌ ಮೇಲ್‌ ಹೆಚ್ಚು ಆಪ್ತ ಎಂದು ನಂಬಲಾಗಿತ್ತು.

ಆದರೆ ಇದು ನಿಜವೆಂದು ಒಪ್ಪಲಾಗದು ಎಂದು ಸಂಶೋಧಕರು ಹೇಳಿದ್ದಾರೆ. ಇ–ಮೇಲ್‌ನಲ್ಲಿನ ಕೊನೆಯ ಸಾಲು ಹೆಚ್ಚು ಪರಿಣಾಮಕಾರಿ. ಇತರರಿಗೆ ಏನು  ಹೇಳಬೇಕೆಂಬುದನ್ನು ಇದು ಸಮರ್ಪಕ ವಾಗಿ ಸಂವಹನ ಮಾಡುತ್ತದೆ ಎನ್ನುತ್ತಾರೆ ಇಂಡಿಯಾನ ವಿಶ್ವವಿದ್ಯಾಲಯದ ಕೆಲ್ಲಿ ಸ್ಕೂಲ್‌ ಆಫ್‌ ಬ್ಯುಸಿನೆನ್‌ನ ಅಂತರ್ಜಾಲ ವಿಭಾಗದ ಅಲನ್‌ ಆರ್‌. ಡೆನ್ನಿಸ್‌.

ಈ ಅಧ್ಯಯನಕ್ಕೆ 72 ಕಾಲೇಜು ವಿದ್ಯಾರ್ಥಿಗಳನ್ನು ಬಳಸಿಕೊಳ್ಳಲಾಗಿದೆ. ವಾಯ್ಸ್‌ ಮೇಲ್‌ಗಳು ಸಪ್ಪೆಯಾಗಿದ್ದರೆ ಪ್ರಣಯಭರಿತ ಇ-ಮೇಲ್‌ ಸಂದೇಶಗಳಲ್ಲಿ ಸಾಕಷ್ಟು ಚಿಂತನೆ ನಡೆಸಿ ಭಾಷೆಯನ್ನು ಬಳಸಲಾಗಿತ್ತು. ಇವು ಪ್ರಣಯವನ್ನು ಉದ್ದೀಪಿಸುವಂತಿದ್ದವು ಎಂದು ಅಧ್ಯಯನ ನಡೆಸಿದವರು ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.