ADVERTISEMENT

ಬಾಂಬ್ ದಾಳಿ: ಆಫ್ಘನ್ ಅಧ್ಯಕ್ಷರ ಸೋದರ ಸಂಬಂಧಿ ಸಾವು

​ಪ್ರಜಾವಾಣಿ ವಾರ್ತೆ
Published 29 ಜುಲೈ 2014, 9:11 IST
Last Updated 29 ಜುಲೈ 2014, 9:11 IST

ಕಾಬೂಲ್ (ಐಎಎನ್‌ಎಸ್): ಕಂದಹಾರ್‌ನ ದಕ್ಷಿಣ ಪ್ರಾಂತ್ಯದಲ್ಲಿ ಮಂಗಳವಾರ ನಡೆದ ಆತ್ಮಹತ್ಯಾ ಬಾಂಬ್ ದಾಳಿಯಲ್ಲಿ  ಆಫ್ಘನ್ ಅಧ್ಯಕ್ಷ ಹಮೀದ್ ಕರ್ಜೈ ಅವರ ಸೋದರ ಸಂಬಂಧಿ ಹಷ್ಮತ್ ಖಲೀಲ್ ಮೃತಪಟ್ಟಿದ್ದಾರೆಂದು ಪೊಲೀಸ್‌ ಅಧಿಕಾರಿಗಳು ತಿಳಿಸಿದ್ದಾರೆ.

ಈದ್–ಉಲ್–ಫಿತರ್‌ ಹಬ್ಬದ ಅಂಗವಾಗಿ ಶುಭಾಶಯ ಕೋರಲು   ಖಲೀಲ್  ಕರ್ಜೈ ಅವರ ಮನೆಗೆ ಬಂದಿದ್ದ ಆತ್ಮಹತ್ಯಾ ಬಾಂಬರ್‌ ಈ ಹತ್ಯೆ ಮಾಡಿದ್ದಾರೆ.

  ಇಂದು ಬೆಳಿಗ್ಗೆ ಸುಮಾರು 10 ಗಂಟೆಗೆ   ಈ ಘಟನೆ ಸಂಭವಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.