ADVERTISEMENT

‘ಬೆಂಗಳೂರು’ ಜಗತ್ತಿನ ಮೂರನೇ ಅತಿ ಕಡಿಮೆ ಖರ್ಚಿನ ನಗರ

ದುಬಾರಿ ನಗರ ಸಿಂಗಾಪುರ

ಏಜೆನ್ಸೀಸ್
Published 21 ಮಾರ್ಚ್ 2017, 9:34 IST
Last Updated 21 ಮಾರ್ಚ್ 2017, 9:34 IST
‘ಬೆಂಗಳೂರು’ ಜಗತ್ತಿನ ಮೂರನೇ ಅತಿ ಕಡಿಮೆ ಖರ್ಚಿನ ನಗರ
‘ಬೆಂಗಳೂರು’ ಜಗತ್ತಿನ ಮೂರನೇ ಅತಿ ಕಡಿಮೆ ಖರ್ಚಿನ ನಗರ   

ನವದೆಹಲಿ: ಜಗತ್ತಿನ ಅತಿ ದುಬಾರಿ ನಗರಗಳಲ್ಲಿ ಸಿಂಗಾಪುರ ಮೊದಲ ಸ್ಥಾನದಲ್ಲಿದ್ದು, ಬೆಂಗಳೂರು ಸೇರಿದಂತೆ ದೇಶದ ನಾಲ್ಕು ನಗರಗಳು ಕಡಿಮೆ ಖರ್ಚಿನ ನಗರಗಳ ಮೊದಲ ಹತ್ತರ ಪಟ್ಟಿಯಲ್ಲಿ ಸ್ಥಾನ ಪಡೆದಿವೆ.

ಎಕನಾಮಿಸ್ಟ್‌ ಇಂಟೆಲಿಜೆನ್ಸ್‌ ಯುನಿಟ್‌(ಇಐಯು) ವರದಿ ಪ್ರಕಾರ, ಜಗತ್ತಿನ ಹತ್ತು ಕಡಿಮೆ ಖರ್ಚಿನ ನಗರಗಳ ಪೈಕಿ ಬೆಂಗಳೂರು(3ನೇ ಸ್ಥಾನ), ಚೆನ್ನೈ(6ನೇ ಸ್ಥಾನ), ಮುಂಬೈ(7ನೇ ಸ್ಥಾನ) ಹಾಗೂ ನವದೆಹಲಿ(10ನೇ ) ಸ್ಥಾನ ಪಡೆದಿವೆ.

ಕಜಕಸ್ತಾನದ ‘ಆಲ್ಮಟಿ’ ಮೊದಲ ಕಡಿಮೆ ಖರ್ಚಿನ ನಗರವಾಗಿದ್ದು ನೈಜೀರಿಯಾದ ‘ಲಾಗೋಸ್‌’ ನಂತರದ ಸ್ಥಾನದಲ್ಲಿದೆ.

ADVERTISEMENT

ಜಾಗತಿಕ ಜೀವನ ನಿರ್ವಹಣಾ ವೆಚ್ಚ  2017ರ ವರದಿಯ ಪ್ರಕಾರ, ವಿಶ್ವದ ದುಬಾರಿ ನಗರಗಳು ಹಾಗೂ ಕಡಿಮೆ ಖರ್ಚಿನ ನಗರಗಳಲ್ಲಿ ಏಷ್ಯಾ ಭಾಗದ ನಗರಳದ್ದು ಪ್ರಮುಖ ಸ್ಥಾನ.

ಸತತ ನಾಲ್ಕು ವರ್ಷಗಳಿಂದ ಸಿಂಗಾಪುರ ವಿಶ್ವದ ದುಬಾರಿ ನಗರವೆನಿಸಿದ್ದು, ಹಾಂಗ್‌ ಕಾಂಗ್‌ ಹಾಗೂ ಜೂರಿಕ್‌ ನಂತರದ ಸ್ಥಾನದಲ್ಲಿವೆ.

ಆಹಾರ, ನೀರು, ಉಡುಗೆ, ಸಂಚಾರ ಮನೆ ಬಾಡಿಗೆ ಸೇರಿದಂತೆ 160 ಉತ್ಪನ್ನ ಹಾಗೂ ಸೇವೆಗಳ ದರ ಗಮನಿಸಿ ಜೀವನ ನಿರ್ವಹಣಾ ವೆಚ್ಚದ ಸಮೀಕ್ಷೆ ನಡೆಸಲಾಗಿದೆ.

ಕಡಿಮೆ ಖರ್ಚಿನ ನಗರಗಳು:
1. ಆಲ್ಮಟಿ
2. ಲಾಗೋಸ್‌
3. ಬೆಂಗಳೂರು
4. ಕರಾಚಿ
5. ಅಲ್ಜೀರ್ಸ್‌
6. ಚೆನ್ನೈ
7. ಮುಂಬೈ
8. ಕೀವ್‌
9. ಬುಚಾರೆಸ್ಟ್‌
10. ನವದೆಹಲಿ

ದುಬಾರಿ ನಗರಗಳು:
1. ಸಿಂಗಾಪುರ
2. ಹಾಂಗ್‌ ಕಾಂಗ್‌
3. ಜುರಿಕ್‌
4. ಟೋಕಿಯೊ
5. ಒಸಾಕಾ
6. ಸಿಯೋಲ್‌
7. ಜಿನಿವಾ
8. ಪ್ಯಾರಿಸ್‌
9. ನ್ಯೂಯಾರ್ಕ್‌
10. ಕೋಪನ್‌ಹೇಗನ್‌

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.