ADVERTISEMENT

ಬ್ರಿಟನ್‌: ‘ಇಸ್ಲಾಂ ಸಂಬಂಧಿತ ಭಯೋತ್ಪಾದನಾ ದಾಳಿ’– ಐವರು ಸಾವು, 40 ಮಂದಿ ಗಾಯ

ಪಿಟಿಐ
Published 23 ಮಾರ್ಚ್ 2017, 6:09 IST
Last Updated 23 ಮಾರ್ಚ್ 2017, 6:09 IST
ಬ್ರಿಟನ್‌: ‘ಇಸ್ಲಾಂ ಸಂಬಂಧಿತ ಭಯೋತ್ಪಾದನಾ ದಾಳಿ’– ಐವರು ಸಾವು, 40 ಮಂದಿ ಗಾಯ
ಬ್ರಿಟನ್‌: ‘ಇಸ್ಲಾಂ ಸಂಬಂಧಿತ ಭಯೋತ್ಪಾದನಾ ದಾಳಿ’– ಐವರು ಸಾವು, 40 ಮಂದಿ ಗಾಯ   

ಲಂಡನ್‌: ಬ್ರಿಟನ್‌ ಸಂಸತ್‌ ಬಳಿ ಬುಧವಾರ ಏಕಲಾಲದಲ್ಲಿ ವಿವಿಧೆಡೆ ನಡೆದ ಉಗ್ರರ ದಾಳಿಯಲ್ಲಿ ಐವರು ಸಾವಿಗೀಡಾಗಿದ್ದು, 40 ಜನ ಗಾಯಗೊಂಡಿದ್ದಾರೆ. ಇದು ‘ಇಸ್ಲಾಂ ಸಂಬಂಧಿತ ಭಯೋತ್ಪಾದನಾ ದಾಳಿ’ ಎಂದು ಹೇಳಲಾಗಿದೆ.

ವಿವಿಧೆಡೆ ನಡೆದ ದಾಳಿಯಲ್ಲಿ ಒಬ್ಬ ಪೊಲೀಸ್ ಆಧಿಕಾರಿ ಹಾಗೂ ಮೂವರು ನಾಗರಿಕರು ಮೃತಪಟ್ಟಿದ್ದಾರೆ. ದಾಳಿಕೋರನನ್ನು ಭದ್ರತಾ ಪಡೆ ಸಿಬ್ಬಂದಿ ಗುಂಡಿಕ್ಕಿ ಕೊಂದಿದ್ದಾರೆ. ಘಟನೆಯಲ್ಲಿ ಒಬ್ಬ ದಾಳಿಕೋರ ಸೇರಿದಂತೆ ಒಟ್ಟು ಐದು ಮಂದಿ ಸಾವಿಗೀಡಾಗಿದ್ದಾರೆ ಎಂದು ಲಂಡನ್‌ ಮೆಟ್ರೊಪಾಲಿಟನ್‌ ಪೊಲೀಸರು ತಿಳಿಸಿದ್ದಾರೆ.

ಸಂಸತ್‌ ಭವನದ ಬಳಿಯ ವೆಸ್ಟ್‌ಮಿನಿಸ್ಟರ್‌ ಸೇತುವೆ ಮೇಲೆ ಉಗ್ರನೊಬ್ಬ ಕಾರನ್ನು ಪಾದಚಾರಿ ಮಾರ್ಗದ ಮೇಲೆ ನುಗ್ಗಿಸಿ ನಡೆಸಿದ ಮತ್ತೊಂದು ದಾಳಿಯಲ್ಲಿ ಮೂವರು ಮೃತಪಟ್ಟಿದ್ದು, 40 ಜನ ಗಾಯಗೊಂಡಿದ್ದಾರೆ ಎಂದು ಪೊಲೀಸರು ಹೇಳಿದ್ದಾರೆ.

ADVERTISEMENT

ಕಾರು ನುಗ್ಗಿಸಿ ದಾಳಿ ನಡೆದ ಬಳಿಕ ಚಿಕಿತ್ಸೆಗೆ ದಾಖಲಿಸಿದ್ದ ಒಬ್ಬ ಮಹಿಳೆ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾರೆ ಎಂದು ತಿಳಿಸಿದ್ದಾರೆ.

ಉಗ್ರರರ ದಾಳಿಗೆ ವಿಶ್ವದ ವಿವಿಧ ರಾಷ್ಟ್ರಗಳ ನಾಯಕರು ಖಂಡನೆ ವ್ಯಕ್ತಪಡಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.