ADVERTISEMENT

ಬ್ರಿಟನ್: ಉನ್ನತ ಹುದ್ದೆಗೆ ಸಿಖ್ ನ್ಯಾಯಾಧೀಶ ನೇಮಕ

ಪಿಟಿಐ
Published 22 ಜುಲೈ 2017, 19:30 IST
Last Updated 22 ಜುಲೈ 2017, 19:30 IST
ಬ್ರಿಟನ್: ಉನ್ನತ ಹುದ್ದೆಗೆ ಸಿಖ್ ನ್ಯಾಯಾಧೀಶ ನೇಮಕ
ಬ್ರಿಟನ್: ಉನ್ನತ ಹುದ್ದೆಗೆ ಸಿಖ್ ನ್ಯಾಯಾಧೀಶ ನೇಮಕ   

ಲಂಡನ್: ಬ್ರಿಟನ್ ನ್ಯಾಯಾಂಗ ವ್ಯವಸ್ಥೆಯಲ್ಲಿ ಅತ್ಯುನ್ನತ ಹುದ್ದೆಗಳಲ್ಲಿ ಒಂದಾದ ಮೇಲ್ಮನವಿ ನ್ಯಾಯಾಲಯದ ನ್ಯಾಯಾಧೀಶರಾಗಿ ಭಾರತ ಸಂಜಾತ ಸಿಖ್ ವ್ಯಕ್ತಿ ನೇಮಕಗೊಂಡಿದ್ದಾರೆ. ಈ ಹುದ್ದೆಗೆ ನೇಮಕವಾದ ಮೊದಲ ಭಾರತೀಯ ಎನಿಸಿದ್ದಾರೆ.

ಸರ್ ರಬೀಂದ್ರ ಸಿಂಗ್ (53) ಅವರನ್ನು ಏಳು ನ್ಯಾಯಾಧೀಶರ ಮೇಲ್ಮನವಿ ನ್ಯಾಯಾಲಯಕ್ಕೆ ನೇಮಿಸಿ ಸರ್ಕಾರ ಆದೇಶ ಹೊರಡಿಸಿದೆ.
ಕೋರ್ಟ್‌ನಲ್ಲಿ ತಾವು ಧರಿಸುತ್ತಿದ್ದ ಬಿಳಿ ಬಣ್ಣದ ವಿಶಿಷ್ಟ ಟರ್ಬನ್‌ನಿಂದಾಗಿ ರಬೀಂದ್ರಸಿಂಗ್‌ ಹೆಸರಾಗಿದ್ದಾರೆ.

ದೆಹಲಿಯಲ್ಲಿ ಜನಿಸಿದ್ದ ರಬೀಂದ್ರ ಸಿಂಗ್ ಅವರ ಕುಟುಂಬ ಇಂಗ್ಲೆಂಡ್‌ಗೆ ಸ್ಥಳಾಂತರಗೊಂಡಿತ್ತು. ಕ್ಯಾಲಿಫೋರ್ನಿಯಾ ವಿಶ್ವವಿದ್ಯಾಲಯ ಹಾಗೂ ನಾಟಿಂಗ್‌ಹ್ಯಾಮ್ ವಿಶ್ವವಿದ್ಯಾಲಯಗಳಿಂದ ಇವರು ಕಾನೂನು ಪದವಿಗಳನ್ನು ಪಡೆದಿದ್ದಾರೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.