ADVERTISEMENT

ಭೂಮಿಯ ಹೊಸ ಖಂಡ ‘ಜೀಲ್ಯಾಂಡಿಯಾ’!

ಪಿಟಿಐ
Published 17 ಫೆಬ್ರುವರಿ 2017, 10:46 IST
Last Updated 17 ಫೆಬ್ರುವರಿ 2017, 10:46 IST
ಭೂಮಿಯ ಹೊಸ ಖಂಡ ‘ಜೀಲ್ಯಾಂಡಿಯಾ’!
ಭೂಮಿಯ ಹೊಸ ಖಂಡ ‘ಜೀಲ್ಯಾಂಡಿಯಾ’!   

ಮೆಲ್ಬೋರ್ನ್‌: ಪೆಸಿಫಿಕ್‌ ಮಹಾಸಾಗರದ ಅಡಿಯಲ್ಲಿ ಭಾರತ ಉಪ ಖಂಡದಷ್ಟು ದೊಡ್ಡದಾದ ನಾಡು ಹುದಗಿದೆ. ‘ಜೀಲ್ಯಾಂಡಿಯಾ’ ಎಂದು ಹೆಸರಿಸಿರುವ ಈ ನಾಡನ್ನು ಹೊಸ ಖಂಡವೆಂದು ಪರಿಗಣಿಸುವಂತೆ ಬಿಡುಗಡೆಯಾಗಿರುವ ಹೊಸ ಅಧ್ಯಯನದಲ್ಲಿ ಪ್ರಸ್ತಾಪಿಸಲಾಗಿದೆ.

ಪೆಸಿಫಿಕ್‌ ಸಾಗರದ ನೈಋತ್ಯ ಭಾಗದಲ್ಲಿ 49 ಲಕ್ಷ ಕಿ.ಮೀ. ವರೆಗೂ ಈ ಭೂಖಂಡ ವ್ಯಾಪಿಸಿದೆ. ಆಸ್ಟ್ರೇಲಿಯಾದಿಂದ ಪ್ರತ್ಯೇಕಗೊಂಡಿರುವ ಭೂಭಾಗ ಸಾಗರದಲ್ಲಿ ಹುದುಗಿದ್ದು, ಅಧಿಕ ಸಿಲಿಕಾಯುಕ್ತ ಬಂಡೆಕಲ್ಲುಗಳಿಂದ ಕೂಡಿದೆ. ಸಂಶೋಧಕರು ಇದನ್ನು ಜೀಲ್ಯಾಂಡಿಯಾ ಎಂದು ಕರೆದಿದ್ದಾರೆ.

ಭೂಖಂಡದ ಸರಿತ, ಭೂಭಾಗ ತೆಳುವಾಗುವುದು ಹಾಗೂ ಬೇರ್ಪಡುವ ಪ್ರಕ್ರಿಯೆಯಿಂದಾಗಿ ಸಾಗರದಲ್ಲಿ ಹುದುಗಿರುವ ಭೂಭಾಗದ ಕುರಿತು ಆಸ್ಟ್ರೇಲಿಯಾದ ಸಿಡ್ನಿ ವಿವಿ, ನ್ಯೂಜಿಲ್ಯಾಂಡ್‌ನ ವಿಕ್ಟೋರಿಯಾ ವಿವಿಯ ಸಂಶೋಧಕರು ಅಧ್ಯಯನ ನಡೆಸಿದ್ದಾರೆ.

ADVERTISEMENT

ಪ್ರಸ್ತುತ ಜೀಲ್ಯಾಂಡಿಯಾದ ಶೇ.94ರಷ್ಟು ಭಾಗ ಸಾಗರದೊಳಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.