ADVERTISEMENT

ಮಂಗಳಕ್ಕೆ ಮಾನವ ವಿಧೇಯಕಕ್ಕೆ ಟ್ರಂಪ್‌ ಸಹಿ

₹14 ಲಕ್ಷ ಕೋಟಿ (20 ಶತಕೋಟಿ ಡಾಲರ್‌) ಮೌಲ್ಯದ ವಿಧೇಯಕ

​ಪ್ರಜಾವಾಣಿ ವಾರ್ತೆ
Published 23 ಮಾರ್ಚ್ 2017, 19:30 IST
Last Updated 23 ಮಾರ್ಚ್ 2017, 19:30 IST
ಮಂಗಳಕ್ಕೆ ಮಾನವ ವಿಧೇಯಕಕ್ಕೆ ಟ್ರಂಪ್‌ ಸಹಿ
ಮಂಗಳಕ್ಕೆ ಮಾನವ ವಿಧೇಯಕಕ್ಕೆ ಟ್ರಂಪ್‌ ಸಹಿ   
ವಾಷಿಂಗ್ಟನ್‌: ನಾಸಾ ಸಂಸ್ಥೆಯ ಕಾರ್ಯಕ್ರಮಗಳಿಗೆ ಹಣ ಒದಗಿಸುವ ಸುಮಾರು ₹14 ಲಕ್ಷ ಕೋಟಿ (20 ಶತಕೋಟಿ ಡಾಲರ್‌) ಮೌಲ್ಯದ ವಿಧೇಯಕಕ್ಕೆ ಡೊನಾಲ್ಡ್‌ ಟ್ರಂಪ್‌ ಸಹಿ ಮಾಡಿದ್ದಾರೆ. ಇದರಲ್ಲಿ ಕೆಂಪು ಗ್ರಹಕ್ಕೆ ಮಾನವರನ್ನು ಕಳಿಸುವ ಯೋಜನೆಯೂ ಸೇರಿದೆ.
 
ಶ್ವೇತಭವನದ ತಮ್ಮ ಓವಲ್‌ ಕಚೇರಿಯಲ್ಲಿ ವಿಧೇಯಕಕ್ಕೆ ಸಹಿ ಹಾಕುವ ಮೂಲಕ ಟ್ರಂಪ್‌ ಬಾಹ್ಯಾಕಾಶ ಪರಿಶೋಧಿಸುವ ಹೊಸ ಸಾಧ್ಯತೆಗಳನ್ನು ತೆರೆದಿಟ್ಟಿದ್ದಾರೆ ಎಂದು ವಿಶ್ಲೇಷಿಸಲಾಗಿದೆ.
 
ಈ ವಿಧೇಯಕದಿಂದಾಗಿ  ಮಂಗಳಗ್ರಹಕ್ಕೆ ಮಾನವನನ್ನು ಕಳಿಸುವ ಯೋಜನೆ ನಾಸಾ ಸಂಸ್ಥೆಯ ಪ್ರಮುಖ ಗುರಿಯಾಗಲಿದೆ ಎಂದು ಟ್ರಂಪ್‌ ಹೇಳಿದ್ದಾರೆ.  ‘ನಾಸಾ 6 ದಶಕಗಳಿಂದ ಬಾಹ್ಯಾಕಾಶಕ್ಕೆ ಸಂಬಂಧಿಸಿದಂತೆ ಅಮೆರಿಕದ ಲಕ್ಷಾಂತರ ಜನರಲ್ಲಿ ಸ್ಪೂರ್ತಿ ತುಂಬಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.