ADVERTISEMENT

‘ಮಂಜುಗಡ್ಡೆ ಒಡೆಯಲು ಭಾರಿ ಗಾಳಿ ಕಾರಣ’

ಪಿಟಿಐ
Published 18 ಜುಲೈ 2017, 19:30 IST
Last Updated 18 ಜುಲೈ 2017, 19:30 IST
‘ಮಂಜುಗಡ್ಡೆ ಒಡೆಯಲು ಭಾರಿ ಗಾಳಿ ಕಾರಣ’
‘ಮಂಜುಗಡ್ಡೆ ಒಡೆಯಲು ಭಾರಿ ಗಾಳಿ ಕಾರಣ’   

ಮೆಲ್ಬರ್ನ್: ಅಂಟಾರ್ಕ್ಟಿಕಾದ ಬೃಹತ್ ನೀರ್ಗಲ್ಲುಗಳು ಒಡೆಯಲು ಭಾರಿ ತೀವ್ರತೆಯ ಗಾಳಿ ಕಾರಣ ಎಂದು ವಿಜ್ಞಾನಿಗಳು ಹೇಳಿದ್ದಾರೆ. ದಕ್ಷಿಣ ತುದಿಯಲ್ಲಿ ಇತ್ತೀಚೆಗೆ  1 ಲಕ್ಷ ಸಾವಿರ ಕೋಟಿ ಟನ್‌ ತೂಕದ ಮಂಜುಗಡ್ಡೆ ಹೋಳಾಗಿತ್ತು.

6000 ಕಿ.ಮೀ ದೂರದಿಂದಲೇ ಹೇಗೆ ಪ್ರಬಲವಾದ ಬಿರುಗಾಳಿಯು ಅಂಟಾರ್ಕ್ಟಿಕಾಗೆ ಅಪ್ಪಳಿಸುತ್ತದೆ  ಹಾಗೂ ಪಶ್ಚಿಮ ಅಂಟಾರ್ಕ್ಟಿಕಾ ಪರ್ಯಾಯ ದ್ವೀಪದಲ್ಲಿ ಭಾರಿ ಪ್ರಮಾಣದ ಮಂಜುಗಡ್ಡೆ ಕರಗುವಿಕೆಗೆ ಕಾರಣವಾಗುತ್ತದೆ ಎಂದು ವಿಜ್ಞಾನಿಗಳು ವಿವರಿಸಿದ್ದಾರೆ.

ಪೂರ್ವ ಅಂಟಾರ್ಕ್ಟಿಕಾದಲ್ಲಿ ಸಮುದ್ರಮಟ್ಟದಲ್ಲಿ ಬೀಸುವ ಗಾಳಿಯು  ಕ್ರಮೇಣ ಸಮುದ್ರ ಗಾಳಿಯಾಗಿ (ಕೆಲ್ವಿನ್ ವೇವ್) ಪರಿವರ್ತನೆಯಾಗಿ ಇಡೀ ಖಂಡದಲ್ಲಿ ಗಂಟೆಗೆ 700 ಕಿ.ಮೀ ವೇಗದಲ್ಲಿ ಪಸರಿಸುತ್ತದೆ.

ADVERTISEMENT

ಈ ಗಾಳಿಯು ಅತ್ಯಂತ ಆಳದ ನೀರಿನಲ್ಲಿ ಒತ್ತಡ ಸೃಷ್ಟಿಸಿ, ಅಲ್ಲಿರುವ ಬೆಚ್ಚಗಿನ ನೀರು ಬೃಹತ್ ಮಂಜುಗಡ್ಡೆಗಳ ಕಡೆಗೆ ದಂಡೆಯುದ್ದಕ್ಕೂ ಹರಿಯುತ್ತದೆ.  ಹಲವು ದಶಕಗಳಿಂದ ನಡೆಯುತ್ತಿರುವ ಈ ಪ್ರಕ್ರಿಯೆಯಿಂದಾಗಿ ಬೃಹತ್ ಮಂಜುಗಡ್ಡೆ ಹೋಳಾಗುವ ಹಾಗೂ ಕರಗುವ ವಿದ್ಯಮಾನ ನಡೆಯುತ್ತಿದೆ ಎಂದು ಆಸ್ಟ್ರೇಲಿಯಾ ಹವಾಮಾನ ವ್ಯವಸ್ಥೆ ಕೇಂದ್ರದ ಪಾಲ್ ಸ್ಪೆನ್ಸ್ ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.