ADVERTISEMENT

ಮಂಡೇಲಾ ಪುಸ್ತಕ ಬಿಡುಗಡೆಗೆ ಹೆಂಡತಿ ಕಿಡಿ

ಪಿಟಿಐ
Published 21 ಜುಲೈ 2017, 19:30 IST
Last Updated 21 ಜುಲೈ 2017, 19:30 IST

ಜೋಹಾನ್ಸ್‌ಬರ್ಗ್‌: ದಕ್ಷಿಣ ಆಫ್ರಿಕಾದ ಮೊದಲ ಚುನಾಯಿತ ಅಧ್ಯಕ್ಷ ನೆಲ್ಸನ್ ಮಂಡೇಲಾ ಅವರ ಕೊನೆಯ ದಿನಗಳ ಬಗ್ಗೆ ಅವರ ಖಾಸಗಿ ವೈದ್ಯ ಬರೆದಿರುವ ಪುಸ್ತಕದ ಕುರಿತು ಮಂಡೇಲಾ ಅವರ ಹೆಂಡತಿ ಕಿಡಿ ಕಾರಿದ್ದಾರೆ. ‘ಮಂಡೇಲಾರ ಕೊನೆಯ ದಿನಗಳು’ ಎಂಬ ಪುಸ್ತಕ ಬರೆದಿರುವ ವೈದ್ಯ ವೆಜಯ್ ರಾಮಾಕ್ಲನ್ ಅವರ ವಿರುದ್ಧ ಕಾನೂನು ಕ್ರಮ ತೆಗೆದುಕೊಳ್ಳುವುದಾಗಿ ಹೇಳಿದ್ದಾರೆ.

ಮಂಡೇಲಾ ಅವರನ್ನು ಆಸ್ಪತ್ರೆಗೆ ಸಾಗಿಸುತ್ತಿದ್ದ ಆಂಬುಲೆನ್ಸ್‌ಗೆ ಬೆಂಕಿ ಹೊತ್ತಿಕೊಂಡಿತ್ತು ಎಂಬುದೂ ಸೇರಿದಂತೆ ವೆಜಯ್ ಅವರು ಅವರ ಸಾವಿನ ಕುರಿತು ಹಲವು ಅಚ್ಚರಿಯ ವಿಷಯಗಳನ್ನು ಈ ಪುಸ್ತಕದಲ್ಲಿ ಉಲ್ಲೇಖಿಸಿದ್ದಾರೆ. ದಂಪತಿ ನಡುವೆ ಇದ್ದ ವೈಮನಸ್ಸಿನ ಕುರಿತೂ ಅದರಲ್ಲಿ ವಿವರಿಸಲಾಗಿದೆ.

‘ತಮ್ಮ ರೋಗಿಯ ರಹಸ್ಯಗಳನ್ನು ಈ ರೀತಿ ವೈದ್ಯರೊಬ್ಬರು ಬಹಿರಂಗಪಡಿಸಿರುವುದು ಸರಿಯಲ್ಲ. ಇವರ ವಿರುದ್ಧ ಯಾವ ರೀತಿಯ ಕ್ರಮ ತೆಗೆದುಕೊಳ್ಳಬೇಕು ಎನ್ನುವ ಬಗ್ಗೆ ಕಾನೂನು ಪಂಡಿತರ ಜೊತೆ ಚರ್ಚಿಸುತ್ತೇನೆ’ ಎಂದಿದ್ದಾರೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.