ADVERTISEMENT

ಮಗನ ಹಂತಕನ ಕ್ಷಮಿಸಿದ ತಾಯಿ!

​ಪ್ರಜಾವಾಣಿ ವಾರ್ತೆ
Published 18 ಏಪ್ರಿಲ್ 2014, 19:30 IST
Last Updated 18 ಏಪ್ರಿಲ್ 2014, 19:30 IST
ಇರಾನ್‌ನ ನೊವ್‌ಶೈರ್‌ ಪಟ್ಟಣದಲ್ಲಿ ಮಂಗಳವಾರ ಸಮೆರಾ ಅಲಿನೆಜಾದ್‌ (ಬಲತುದಿ) ಎಂಬ ತಾಯಿ ತನ್ನ ಮಗನ ಹಂತಕನಿಗೆ ಭಾವೋದ್ವೇಗದಿಂದ ಕೆನ್ನೆಗೆ ಹೊಡೆದು ನಿರಾಳ ಭಾವದಿಂದ ಆತನ ತಪ್ಪನ್ನು ಮನ್ನಿಸಿದರು 	–ಎಎಫ್‌ಪಿ ಚಿತ್ರ
ಇರಾನ್‌ನ ನೊವ್‌ಶೈರ್‌ ಪಟ್ಟಣದಲ್ಲಿ ಮಂಗಳವಾರ ಸಮೆರಾ ಅಲಿನೆಜಾದ್‌ (ಬಲತುದಿ) ಎಂಬ ತಾಯಿ ತನ್ನ ಮಗನ ಹಂತಕನಿಗೆ ಭಾವೋದ್ವೇಗದಿಂದ ಕೆನ್ನೆಗೆ ಹೊಡೆದು ನಿರಾಳ ಭಾವದಿಂದ ಆತನ ತಪ್ಪನ್ನು ಮನ್ನಿಸಿದರು –ಎಎಫ್‌ಪಿ ಚಿತ್ರ   

ಟೆಹರಾನ್‌(ಎಎಫ್‌ಪಿ):  ಇನ್ನೇನು ನೇಣಿ­ಗೇರ­ಬೇಕಾಗಿದ್ದ ಮಗನ ಕೊಲೆ­ಗಾರ­ನನ್ನು ತಾಯಿಯೇ ರಕ್ಷಿಸಿದ ಅಪ­ರೂಪದ ಘಟನೆ­ ಇರಾನ್‌­ನಲ್ಲಿ ನಡೆದಿದೆ.

೨೦೦೭ರಲ್ಲಿ ನಡೆದ ಬೀದಿ ಕಾಳಗ­ದಲ್ಲಿ ಬಲಾಲ್‌ ಎಂಬಾತ ಅಬ್ದುಲ್ಲಾ ಹುಸೇನ್‌ ಜಾದ್‌ ಎಂಬಾತನನ್ನು ಚಾಕು­ವಿನಿಂದ ಇರಿದು ಕೊಲೆ ಮಾಡಿದ್ದ.  ಈ ಆರೋಪಕ್ಕಾಗಿ ಬಲಾಲ್‌­­ನನ್ನು ಮಂಗಳ­ವಾರ ಬೆಳಿಗ್ಗೆ ಸಾರ್ವ­ಜನಿಕವಾಗಿ ನೇಣಿ­ಗೇರಿ­ಸಲು ಸಿದ್ಧತೆ ಮಾಡ­ಲಾಗಿತ್ತು.

ಆದರೆ ಆ ವೇಳೆಗೆ ಅಲ್ಲಿ ಬಂದ ಹುಸೇನ್‌ ತಾಯಿ ಸಮೆರಾ ಅಲಿನೆಜಾದ್‌, ‘ಮಕ್ಕಳಿ­ಲ್ಲದ ಮನೆ­ಯಲ್ಲಿ ಬದುಕುವುದು ಎಷ್ಟು ಕಷ್ಟ ಎನ್ನು­ವುದು ನಿಮಗೆ ಗೊತ್ತಾ’ ಎಂದು ಅಲ್ಲಿ ಸೇರಿದ್ದ ಜನಸ್ತೋಮವನ್ನು ಕೇಳಿ­­ದರು. ನಂತರ ಭಾವೋ­ದ್ವೇಗದಿಂದ ಬಲಾಲ್‌ ಕೆನ್ನೆಗೆ ಹೊಡೆದು ಆತನ ಕೊರಳ­ಲ್ಲಿದ್ದ ಕುಣಿಕೆಯನ್ನು ಕಳಚಿದರು. 

‘ನನಗೆ ನಂಬಿಕೆ ಇದೆ.  ನನ್ನ ಪುತ್ರ ಕನಸಿ­ನಲ್ಲಿ ಬಂದು ಅಮ್ಮಾ ನಾನು ಇಲ್ಲಿ ಶಾಂತಿ­ಯಿಂದ ಇದ್ದೇನೆ ಎಂದಿದ್ದ. ಇದಾದ ಬಳಿಕ ನನ್ನ ತಾಯಿ ಸೇರಿದಂತೆ ಎಲ್ಲ ಬಂಧುಗಳು ನನ್ನ ಪುತ್ರನನ್ನು ಕೊಲೆ ಮಾಡಿದ ಆರೋಪಿಯನ್ನು ಕ್ಷಮಿಸು­ವಂತೆ ಒತ್ತಾಯಿಸಿದರು.’
‘ಜೀವದಾನ ನೀಡಿ ಎಂದು ಆರೋಪಿ ಕೂಗಿಗೊಳ್ಳುತ್ತಿದ್ದ. ನಾನು ಆತನ ಕೆನ್ನೆಗೆ ಬಾರಿಸಿದೆ. ಆಗ ನನಗೆ ಸಮಾಧಾನ­ವಾ­ಯಿತು. ಈಗ ನಾನು ಅವನನ್ನು ಕ್ಷಮಿಸಿ­ದ್ದೇನೆ. ನನ್ನಲ್ಲಿ ನಿರಾಳ ಭಾವ ಮನೆ ಮಾಡಿದೆ’ ಎಂದು ಸಮೆರಾ ಅಲಿನೆಜಾದ್‌ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.