ADVERTISEMENT

ಮತ್ತೆ ಭೂಕಂಪ: ನೇಪಾಳ 42, ಭಾರತ 17 ಸಾವು

​ಪ್ರಜಾವಾಣಿ ವಾರ್ತೆ
Published 12 ಮೇ 2015, 13:38 IST
Last Updated 12 ಮೇ 2015, 13:38 IST

ಬಿಹಾರ, ಕಠ್ಮಂಡು, ಪಟ್ನಾ (ಪಿಟಿಐ, ಐಎಎನ್ ಎಸ್): ನೇಪಾಳ ಹಾಗೂ ಉತ್ತರ ಭಾರತದಲ್ಲಿ ಮಂಗಳವಾರ ಮಧ್ಯಾಹ್ನ ಸಂಭವಿಸಿದ ಭೂಕಂಪವು ಒಟ್ಟು 59 ಮಂದಿಯನ್ನು ಬಲಿ ಪಡೆದಿದೆ. 1,156ಕ್ಕೂ ಹೆಚ್ಚು ಜನ ಗಾಯಗೊಂಡಿದ್ದಾರೆ.

ನೇಪಾಳದ ಡೋಲ್ಕ ಜಿಲ್ಲೆಯಲ್ಲಿ ಕಟ್ಟಡಗಳು ಕುಸಿತು 19 ಮಂದಿ ಮೃತರಾಗಿದ್ದಾರೆ. ಸಿಂಧ್ ಪೌಲ್ ಚೌಕದಲ್ಲಿ ಕಟ್ಟಡಗಳು ಕುಸಿದು ನಾಲ್ವರು ಮೃತಪಟ್ಟಿದ್ದು, 12 ಮಂದಿ ಗಾಯಗೊಂಡಿದ್ದಾರೆ. ಒಟ್ಟು 42 ಮಂದಿ ಸಾವಿಗೀಡಾಗಿದ್ದು, 1,117ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆ ಎಂದು ನೇಪಾಳದ ಗೃಹ ಸಚಿವಾಲಯ ತಿಳಿಸಿದೆ.

ಭಾರತ: ಬಿಹಾರದಲ್ಲಿ ವಿವಿಧೆಡೆ ಕಟ್ಟಡಗಳ ಗೋಡೆ ಕುಸಿದು 16 ಮಂದಿ ಮೃತಪಟ್ಟಿದ್ದಾರೆ. 24ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆ. ಪಶ್ಚಿಮ ಬಂಗಾಳದಲ್ಲಿ ಗೋಡೆ ಕುಸಿದು ಎಂಟು ಮಂದಿ ಗಾಯಗೊಂಡಿದ್ದಾರೆ. ಭಾರತದಲ್ಲಿ ಒಟ್ಟು 17 ಮಂದಿ ಸಾವಿಗೀಡಾಗಿದ್ದು, ಒಟ್ಟು 39 ಮಂದಿ ಗಾಯಗೊಂಡಿರುವ ಬಗ್ಗೆ ವರದಿಯಾಗಿದೆ. 

ದೆಹಲಿಯಲ್ಲಿ ಸರ್ಕಾರಿ ಕಟ್ಟಡಗಳಿಂದ ಜನರನ್ನು ತಕ್ಷಣಕ್ಕೆ ಖಾಲಿ ಮಾಡಿಸಲಾಗಿದೆ. ಶಾಲೆಗಳಿಂದ ಹೊರ ಬಂದ ವಿದ್ಯಾರ್ಥಿಗಳು ಮೈದಾನದಲ್ಲಿ ನಿಂತಿದ್ದಾರೆ. ಕೋಲ್ಕತ್ತದಲ್ಲಿ ಭೂಮಿ ಕಂಪಿಸುತ್ತಿದ್ದಂತೆ ಜನರು ಕಟ್ಟಡಗಳಿಂದ ಹೊರ ಬಂದು ರಸ್ತೆಯಲ್ಲಿ ನಿಂತಿದ್ದಾರೆ.

ನೇಪಾಳದಲ್ಲಿ ಭೂಮಿ ಕುಸಿತ ಉಂಟಾದ ದೃಶ್ಯಕ್ಕೆ ಇಲ್ಲಿ ಕ್ಲಿಕ್ ಮಾಡಿ:
https://youtu.be/KIZ0SxNP5k8

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT