ADVERTISEMENT

ಮತ್ತೆ 30 ಕ್ರೈಸ್ತರ ಶಿರಚ್ಛೇದ

ವಿಡಿಯೊ ಬಿಡುಗಡೆ ಮಾಡಿದ ‘ಐಎಸ್‌’

​ಪ್ರಜಾವಾಣಿ ವಾರ್ತೆ
Published 19 ಏಪ್ರಿಲ್ 2015, 19:39 IST
Last Updated 19 ಏಪ್ರಿಲ್ 2015, 19:39 IST

ಟ್ರಿಪೊಲಿ (ಎಎಫ್‌ಪಿ): ಇಥಿಯೋಪಿಯಾದ 30 ಕ್ರೈಸ್ತರನ್ನು ಲಿಬಿಯಾದಲ್ಲಿ ಶಿರಚ್ಛೇದ ಮಾಡಿದ ವಿಡಿಯೊವನ್ನು ಇಸ್ಲಾಮಿಕ್‌ ಸ್ಟೇಟ್‌ ಉಗ್ರರು ಭಾನುವಾರ ಬಿಡುಗಡೆ ಮಾಡಿದ್ದಾರೆ.

29 ನಿಮಿಷ ಅವಧಿಯ ವಿಡಿಯೊದಲ್ಲಿ ಎರಡು ಗುಂಪುಗಳು ಹತ್ಯೆ ಮಾಡಿರುವುದು ಸ್ಪಷ್ಟವಾಗಿದ್ದು, ಶತ್ರುಗಳು ಇಥಿಯೋಪಿನ್‌  ಚರ್ಚ್‌ನ ಅನುಯಾಯಿಗಳು’ ಎಂಬ ಅಕ್ಷರಗಳನ್ನು  ಅದರಲ್ಲಿ ನಮೂದಿಸಿದ್ದಾರೆ.

ಮುಖಕ್ಕೆ ಕಪ್ಪು ಬಟ್ಟೆ ಸುತ್ತಿಕೊಂಡು ಕೈಯಲ್ಲಿ ಪಿಸ್ತೂಲ್‌ ಹಿಡಿದುಕೊಂಡಿರುವ ಉಗ್ರರು, ‘ಇಸ್ಲಾಂ ಧರ್ಮಕ್ಕೆ ಕ್ರೈಸ್ತರು ಮತಾಂತರಗೊಳ್ಳುವವರೆಗೂ ಹತ್ಯೆ ನಿಲ್ಲದು’ ಎಂಬ ಹೇಳಿಕೆ ನೀಡಿದ್ದು, ಇನ್ನಷ್ಟು ಆತಂಕಕ್ಕೆ ಕಾರಣವಾಗಿದೆ.

ಒಂದು ಗುಂಪು 12 ಜನರನ್ನು ಬೀಚ್‌ನಲ್ಲಿ ಕರೆದುಕೊಂಡು ಹೋಗುವ ದೃಶ್ಯ ಕಾಣಿಸಿದರೆ, ಇನ್ನೊಂದು ವಿಡಿಯೊದಲ್ಲಿ 16 ಜನರನ್ನು ಮರಳಿನಲ್ಲಿ ನಿಲ್ಲಿಸಿಕೊಂಡಿರುವ ದೃಶ್ಯ ಇದೆ.

ಆದರೆ, ಈ ಸಮಯದಲ್ಲಿ ಎಷ್ಟು ಮಂದಿಯನ್ನು ಹತ್ಯೆ ಇಲ್ಲವೇ ಶಿರಚ್ಛೇದ ಮಾಡಲಾಯಿತು ಎಂಬ ಅಂಶಗಳು ಈ ವಿಡಿಯೊದಲ್ಲಿ ಸಿಗುತ್ತಿಲ್ಲ.
‘ಈ ಸಿರಿಯಾ ಕ್ರೈಸ್ತರಿಗೆ ಇಸ್ಲಾಂ ಧರ್ಮಕ್ಕೆ ಮತಾಂತರಗೊಳ್ಳುವ ಆಯ್ಕೆ ನೀಡಲಾಗಿತ್ತು. ಹಾಗೆ ಮಾಡದೇ ಇದ್ದರೆ ವಿಶೇಷ ತೆರಿಗೆ ವಿಧಿಸಲಾಗುತ್ತದೆ ಎಂದು ಹೇಳಲಾಗಿತ್ತು.

ಹೇಳಿದಂತೆ ಮಾಡಲಾಗಿದೆ ಎಂಬ ತುಣುಕು ಹತ್ಯೆಗಿಂತ ಮೊದಲು ತೋರಿಸಲಾಗಿದೆ. ಇಸ್ಲಾಮಿಕ್‌ ಸ್ಟೇಟ್‌ ಉಗ್ರರುಉಗ್ರರು ಫೆಬ್ರವರಿ ತಿಂಗಳಲ್ಲಿಯೂ ಲಿಬಿಯಾ ಕರಾವಳಿ ತೀರದಲ್ಲಿ   21 ಈಜಿಪ್ಟ್‌ ಕ್ರೈಸ್ತರನ್ನು ಹತ್ಯೆ ಮಾಡಿದ್ದ ವಿಡಿಯೊ ತುಣುಕನ್ನು ಬಿಡುಗಡೆ ಮಾಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.